HomeKarnatakaವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಡಿಜಿಟಲ್ ಸ್ಟುಡಿಯೋ ಸ್ಥಾಪನೆ: ಮಧು ಬಂಗಾರಪ್ಪ

ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಡಿಜಿಟಲ್ ಸ್ಟುಡಿಯೋ ಸ್ಥಾಪನೆ: ಮಧು ಬಂಗಾರಪ್ಪ

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ- ಶೈಕ್ಷಣಿಕ ಪ್ರತಿಭೆ ಅನಾವರಣಗೊಳಿಸಲು ವೇದಿಕೆಯನ್ನು ಒದಗಿಸುವ ‘ಡಿಜಿಟಲ್ ಸ್ಟುಡಿಯೋ’ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗಾಗಿ ಮಲ್ಲಿಗೇನಹಳ್ಳಿಯ

ಸನ್ನಿಧಿ ಸೆಂಟರ್ ಫಾರ್ ಪ್ಯಾಸ್ಟರಲ್ ರಿನೀವಲ್ ಚರ್ಚ್ ಇಲ್ಲಿ ಏರ್ಪಡಿಸಲಾಗಿದ್ದ ‘ನಾನು ವಿಜ್ಞಾನಿ’ ತರಬೇತಿ ಕಾರ್ಯಾಗಾರದಲ್ಲಿ ಶವಿವಾರ ಸಂಜೆ ಭಾಗವಹಿಸಿ ಮಾತನಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ ಡಿಜಿಟಲ್ ಸ್ಟುಡಿಯೋಗಾಗಿ ರೂ. 15 ಲಕ್ಷ ಮೀಸಲಿಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸಣ್ಣ ಸಣ್ಣ ವಿಡಿಯೋ ತುಣುಕುಗಳ‌ ಮೂಲಕ ಪ್ರದರ್ಶಿಸಬೇಕು. ಆ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾಗುವುದು. ಆಗ ವಿದ್ಯಾರ್ಥಿಗಳ ರೀಲ್ಸ್ ಗೀಳು ಸಹ ಕಡಿಮೆಯಾಗಲಿದ್ದು, ವಿನೂತನ ವೈಜ್ಞಾನಿಕ ಆವಿಷ್ಕಾರಗಳು, ಇತರೆ ವಿಷಯ ಕಲಿಕೆ ಕಡೆ ಹೆಚ್ಚಿನ ಗಮನ ಹರಿಯಲಿದೆ ಎಂದರು.

ಜಿ.ಪಂ ಸಿಇಓ ಹೇಮಂತ್ ಎನ್. ಮಾತನಾಡಿ, ಈ ತರಬೇತಿ‌ ಮೂಲಕ ಗ್ರಾಮೀಣ ಜ್ಞಾನ ಕೇಂದ್ರಗಳನ್ನು ಕೌತುಕದ ವಿಜ್ಞಾನ ಕಲಿಕಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಲಾಗಿದ್ದು, ಅರಿವು ಕೇಂದ್ರದ ಗ್ರಂಥಪಾಲಕರಿಗಾಗಿ ನಾನು ವಿಜ್ಞಾನಿ ಎಂಬ ವಿಜ್ಞಾನ ಮತ್ತು ಖಗೋಳಶಾಸ್ತ್ರ ಕಾರ್ಯಾಗಾರವನ್ನು ಯಶಸ್ವಿಯಾಗಿ ಪ್ರಾರಂಭಿಸುವ ಮೂಲಕ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಪ್ರವರ್ತಕ ಹೆಜ್ಜೆಯನ್ನು ಇಡಲಾಗಿದೆ. ಈ ಪ್ರಾಯೋಗಿಕ ಅನುಭವದಲ್ಲಿ ಗ್ರಂಥಪಾಲಕರು ತಮ್ಮದೇ ಆದ ದೂರದರ್ಶಕಗಳನ್ನು ವಿನ್ಯಾಸಗೊಳಿಸಿ, ತಯಾರಿಸಿದ್ದಾರೆ ಹಾಗೂ ಇವುಗಳ ‌ಮೂಲಕ  ಗ್ರಹಗಳು ಮತ್ತು ಉಪಗ್ರಹಗಳನ್ನು ವೀಕ್ಷಿಸಬಹುದಾಗಿದೆ ಎಂದರು.

ಈ ಉಪಕ್ರಮದ ಭಾಗವಾಗಿ ಶಿವಮೊಗ್ಗದಾದ್ಯಂತ ವಿಜ್ಞಾನ ಕ್ಲಬ್‌ ಗಳನ್ನು ಸ್ಥಾಪಿಸಲಾಗುವುದು. ಗ್ರಂಥಪಾಲಕರು ಹವ್ಯಾಸಿ ಖಗೋಳಶಾಸ್ತ್ರಜ್ಞರಾಗಿ ಹೊಸ ಪಾತ್ರವನ್ನು ವಹಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಸಮುದಾಯಗಳು ಬ್ರಹ್ಮಾಂಡದ ಅದ್ಭುತಗಳನ್ನು ಅನ್ವೇಷಿಸಲು ಮತ್ತು ವೈಜ್ಞಾನಿಕ ಕುತೂಹಲವನ್ನು ಬೆಳೆಸಲು ಮಾರ್ಗದರ್ಶನ ನೀಡುತ್ತಾರೆಂದು ಭರವಸೆ ವ್ಯಕ್ತಪಡಿಸಿದರು.

ಟೆಲಿಸ್ಕೋಪ್ ಗಳಿಗೆ ಬಹಳ ಬೇಡಿಕೆ ಇದೆ. ಗ್ರಂಥಪಾಲಕರೇ ಸಿದ್ದಪಡಿಸಿರುವ ಈ ಟೆಲಿಸ್ಕೋಪ್ ಮೂಲಕ ರಾತ್ರಿಯಲ್ಲಿ‌ ನಕ್ಷತ್ರಗಳು, ಚಲಿಸುತ್ತಿರವ ಸ್ಯಾಟಲೈಟ್ ಗಳು, ಈಗ ಗುರು ಗ್ರಹವನ್ನು ಈ ಟೆಲಿಸ್ಕೋಪ್ ಮೂಲಕ ಹತ್ತಿರದಿಂದ ಕಾಣಬಹುದು. ಗುರುಗ್ರಹ 40 ಪಟ್ಟು ಹತ್ತಿರ ಕಾಣುತ್ತದೆ, ಪಶ್ಚಿಮ ಘಟ್ಟದಲ್ಲಿ‌ನ ಆಕಾಶ ಅದ್ಭುತವಾಗಿ ಕಾಣುತ್ತದೆ ಎಂದು ವಿಜ್ಞಾನಿಗಳು ಹೇಳಿದರು. ಸನ್ನಿಧಿ ಸೆಂಟರ್ ಫಾರ್ ಪ್ಯಾಸ್ಟರಲ್ ರಿನೀವಲ್ ಚರ್ಚ್ ಮುಖ್ಯಸ್ಥ ಫಾ.ಪಿಂಟೋ, ವಿಜ್ಞಾನಿಗಳು, ಗ್ರಂಥಪಾಲಕರು ಮುಂತಾದವರು ಉಪಸ್ಥಿತರಿದ್ದರು

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular