HomeHealthಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯಲು ಯಾವ ಹಿಟ್ಟಿನ ರೋಟಿ ಸೂಕ್ತ? ಪೌಷ್ಟಿಕತಜ್ಞರ ಮಹತ್ವದ ಮಾಹಿತಿ

ಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯಲು ಯಾವ ಹಿಟ್ಟಿನ ರೋಟಿ ಸೂಕ್ತ? ಪೌಷ್ಟಿಕತಜ್ಞರ ಮಹತ್ವದ ಮಾಹಿತಿ

ಮಧುಮೇಹ ಇರುವವರು ತಮ್ಮ ಆಹಾರ ಕ್ರಮದಲ್ಲಿ ರೋಟಿ ಅಥವಾ ಚಪಾತಿಯನ್ನು ಸಂಪೂರ್ಣವಾಗಿ ತೊರೆಯುವ ಅಗತ್ಯವಿಲ್ಲ. ಹಿಟ್ಟಿನ ಆಯ್ಕೆ ಸರಿಯಾಗಿದ್ದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ಉದಯಪುರದ ಪೌಷ್ಟಿಕತಜ್ಞೆ ಮತ್ತು ಹೆಲ್ತ್ ಕೋಚ್ ಡಾ. ರಿಧಿಮಾ ಖಮೇಸ್ರಾ ತಿಳಿಸಿದ್ದಾರೆ. ಸಂಸ್ಕರಿಸಿದ ಹಿಟ್ಟಿನ ಬದಲು ನಾರು (ಫೈಬರ್) ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಧಾನ್ಯಗಳ ಹಿಟ್ಟನ್ನು ಬಳಸುವುದು ಮಧುಮೇಹಿಗಳಿಗೆ ಹೆಚ್ಚು ಸೂಕ್ತವಾಗಿದೆ.

ಡಾ. ರಿಧಿಮಾ ಅವರು ಶಿಫಾರಸು ಮಾಡುವ 4 ಉತ್ತಮ ರೋಟಿಗಳು ಇಲ್ಲಿವೆ:

1. ಜೇವರಿ (ಬಾರ್ಲಿ) ರೋಟಿ: ಬಾರ್ಲಿಯಲ್ಲಿ ‘ಬೀಟಾ-ಗ್ಲುಕನ್’ ಎಂಬ ಕರಗುವ ನಾರಿನಂಶವಿದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ಆಹಾರ ತಿಂದ ತಕ್ಷಣ ರಕ್ತದಲ್ಲಿ ಸಕ್ಕರೆ ಮಟ್ಟ ಸಡನ್ ಆಗಿ ಏರಿಕೆಯಾಗದಂತೆ ತಡೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2. ತೌಡು ಸಹಿತ ಗೋಧಿ ರೋಟಿ: ಮೈದಾ ಅಥವಾ ಅತಿಯಾಗಿ ಸಂಸ್ಕರಿಸಿದ ಗೋಧಿ ಹಿಟ್ಟಿನ ಬದಲು, ತೌಡು (ಬ್ರಾನ್) ಒಳಗೊಂಡಿರುವ ಪೂರ್ಣ ಪ್ರಮಾಣದ ಗೋಧಿ ಹಿಟ್ಟನ್ನು ಬಳಸುವುದು ಉತ್ತಮ. ಇದರಲ್ಲಿರುವ ನಾರಿನಂಶವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಂಟ್ರೋಲ್‌ನಲ್ಲಿಡಲು ನೆರವಾಗುತ್ತದೆ.

3. ಸಿರಿಧಾನ್ಯಗಳ ರೋಟಿ (ಜೋಳ, ಸಜ್ಜೆ, ರಾಗಿ): ಸಿರಿಧಾನ್ಯಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿರುತ್ತವೆ. ಟೈಪ್ 2 ಡಯಾಬಿಟಿಸ್ ಇರುವವರಲ್ಲಿ ಇವು ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಡಲು ಅತ್ಯಂತ ಉಪಯುಕ್ತವಾಗಿವೆ.

4. ಕಡಲೆ ಹಿಟ್ಟಿನ (ಬೇಸನ್) ರೋಟಿ: ಕಡಲೆ ಹಿಟ್ಟಿನಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುತ್ತದೆ. ಇದು ಇತರ ಕಾರ್ಬೋಹೈಡ್ರೇಟ್‌ಗಳಿಗೆ ಹೋಲಿಸಿದರೆ ಆಹಾರ ತಿಂದ ನಂತರ ಸಕ್ಕರೆ ಮಟ್ಟ ತೀವ್ರವಾಗಿ ಏಗದಂತೆ ನೋಡಿಕೊಳ್ಳುತ್ತದೆ.

ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಕಡಿಮೆಯಿರುವ ಮತ್ತು ನಾರಿನಂಶ ಹೆಚ್ಚಿರುವ ಹಿಟ್ಟನ್ನು ಆಯ್ಕೆ ಮಾಡುವುದರ ಜೊತೆಗೆ, ಸೇವಿಸುವ ಪ್ರಮಾಣ (ಪೋರ್ಷನ್ ಸೈಜ್) ಹಾಗೂ ರೋಟಿಯ ಜೊತೆ ಸೇವಿಸುವ ಇತರೆ ಆಹಾರಗಳ ಕಡೆಗೂ ಗಮನ ಹರಿಸುವುದು ಮುಖ್ಯವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular