HomeEntertainmentಹೊಸ ಇತಿಹಾಸ ಬರೆದ ಧುರಂಧರ್ 2: ಇದು ರಣವೀರ್ ಕೆರಿಯರ್‌ನಲ್ಲೇ ಬೆಸ್ಟ್ ಸಿನಿಮಾ ಎಂದ ಕರಣ್...

ಹೊಸ ಇತಿಹಾಸ ಬರೆದ ಧುರಂಧರ್ 2: ಇದು ರಣವೀರ್ ಕೆರಿಯರ್‌ನಲ್ಲೇ ಬೆಸ್ಟ್ ಸಿನಿಮಾ ಎಂದ ಕರಣ್ ಜೋಹರ್

ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರು ಇತ್ತೀಚೆಗಷ್ಟೇ ತೆರೆಕಂಡ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರವನ್ನು ವೀಕ್ಷಿಸಿದ್ದು, ಚಿತ್ರದ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಈ ಸಿನಿಮಾ ರಣವೀರ್ ಸಿಂಗ್ ಅವರ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ಎಂದು ಅವರು ಬಣ್ಣಿಸಿದ್ದಾರೆ.

ಶೂಟಿಂಗ್ ನಿಮಿತ್ತ ಹೊರಗಿದ್ದ ಕಾರಣ ಸಿನಿಮಾ ನೋಡಲು ತಡವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಕರಣ್, ಶುಕ್ರವಾರ ಚಿತ್ರ ವೀಕ್ಷಿಸಿದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. “ಧುರಂಧರ್ 2 ಕೇವಲ ದೇಶಭಕ್ತಿ ಅಥವಾ ಆಕ್ಷನ್ ಚಿತ್ರವಲ್ಲ, ಅದಕ್ಕೂ ಮೀರಿದ ಅದ್ಭುತ ಕಲಾಕೃತಿ. ಜಸ್ಕಿರತ್ ಪಾತ್ರದ ಹಿನ್ನೆಲೆ ಮತ್ತು ದೇಶಕ್ಕಾಗಿ ಮಾಡಿದ ತ್ಯಾಗದ ಕಥೆ ಹೃದಯ ಕಲಕುವಂತಿದೆ. ನಿರ್ದೇಶಕ ಆದಿತ್ಯ ಧರ್ ಅವರ ಮೇಕಿಂಗ್ ಶೈಲಿ ಬಾಲಿವುಡ್‌ನ ಗುಣಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ” ಎಂದು ಕೊಂಡಾಡಿದ್ದಾರೆ.

ಮುಖ್ಯವಾಗಿ ನಟ ರಣವೀರ್ ಸಿಂಗ್ ಅವರ ಅಭಿನಯಕ್ಕೆ ಮಾರುಹೋಗಿರುವ ಕರಣ್, “ರಣವೀರ್, ನೀನು ಎಂತಹ ಅದ್ಭುತ ನಟ! ನಿನ್ನ ಪ್ರತಿಯೊಂದು ಕಣ್ಣೀರು ಮತ್ತು ಸೈಲೆಂಟ್ ಆಗಿ ನೋಡುವ ದೃಶ್ಯಗಳು ನೀನು ಸಾರ್ವಕಾಲಿಕ ಶ್ರೇಷ್ಠ ನಟ ಎಂಬುದನ್ನು ಸಾಬೀತುಪಡಿಸಿವೆ. ಇದು ನಿನ್ನ ಕೆರಿಯರ್ ಬೆಸ್ಟ್ ಕೆಲಸ” ಎಂದು ಹೊಗಳಿದ್ದಾರೆ. ಅಲ್ಲದೆ, ಚಿತ್ರದ ಸೌಂಡ್‌ಟ್ರ್ಯಾಕ್ ಮತ್ತು ಪ್ರತಿಯೊಬ್ಬ ಕಲಾವಿದರ ಶ್ರಮವನ್ನು ಅವರು ಶ್ಲಾಘಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಿನಿಮಾ ತಮಗೆ 70ರ ದಶಕದ ಹಿಂದಿ ಸಿನಿಮಾಗಳನ್ನು ನೆನಪಿಸಿತು ಎಂದು ಹೇಳಿರುವ ಕರಣ್ ಜೋಹರ್, ಒಬ್ಬ ಚಿತ್ರನಿರ್ಮಾಪಕನಾಗಿ ಈ ಚಿತ್ರದ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ. ಮಾರ್ಚ್ 19, 2026 ರಂದು ಬಿಡುಗಡೆಯಾಗಿರುವ ‘ಧುರಂಧರ್ 2’ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟಿ ಯಾಮಿ ಗೌತಮ್ ಅವರ ಅತಿಥಿ ಪಾತ್ರವು ಚಿತ್ರಕ್ಕೆ ವಿಶೇಷ ಮೆರುಗು ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular