HomeKarnatakaBIG NEWS: ಬಾಲಕಿಗೆ ಕಂಡಕ್ಟರ್ ನಿಂದ ಕಪಾಳಮೋಕ್ಷ; ಕ್ಷಮೆಯಾಚನೆ

BIG NEWS: ಬಾಲಕಿಗೆ ಕಂಡಕ್ಟರ್ ನಿಂದ ಕಪಾಳಮೋಕ್ಷ; ಕ್ಷಮೆಯಾಚನೆ

ಧಾರವಾಡ: ಬಾಲಕಿಗೆ ಬಸ್ ಕಂಡಕ್ಟರ್ ಕಪಾಳ ಮೋಕ್ಷ ಮಾಡಿರುವ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಕಂಡಕ್ಟರ್ ವರ್ತನೆ ಖಂಡಿಸಿ ಬಾಲಕಿಯರು, ಪೋಷಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಬಾಲಕಿಗೆ ಕಪಾಳಮೋಕ್ಷ ಮಾಡಿದ ಘಟನೆ ಖಂಡಿಸಿ ವಿದ್ಯಾರ್ಥಿನಿಯರು, ಪೋಷಕರು ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದು, ಕಂಡಕ್ಟರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಪೊಲೀಸರು ಪ್ರತಿಭಟನಾಕಾರ ಮನವೊಲಿಕೆಗೆ ಯತ್ನಿಸಿದ್ದಾರೆ ಆದಾಗ್ಯೂ ಸಾಧ್ಯವಾಗಿಲ್ಲ.

ಅಂತಿಮವಾಗಿ ಕಂಡಕ್ಟರ್ ನನ್ನು ಸ್ಥಳಕ್ಕೆ ಕರೆಸಿದ ಪೊಲೀಸರು ಕ್ಷಮೆಯಾಚಿಸಲು ಹೇಳಿದ್ದಾರೆ. ಕಂಡಕ್ಟರ್ ಸ್ಥಳಕ್ಕೆ ಬಂದು ಕ್ಷಮೆ ಕೋರಿದ್ದಾರೆ. ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಮಕ್ಕಳು, ಪೋಷಕರು ಪ್ರತಿಭಟನೆ ಹಿಂಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular