HomeEntertainment'ಧ್ರುವತಾರೆ' ಚಿತ್ರದ ಟೀಸರ್ ರಿಲೀಸ್

‘ಧ್ರುವತಾರೆ’ ಚಿತ್ರದ ಟೀಸರ್ ರಿಲೀಸ್

ಪ್ರತೀಕ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಧ್ರುವತಾರೆ’ ಚಿತ್ರ ಸದ್ಯ ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಇದರ ಟೀಸರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ.

ಈ ಚಿತ್ರವನ್ನು ಜಿಪಿ ಸ್ಟುಡಿಯೋ ಫಿಲಂ ಸಂಸ್ಥೆ ನಿರ್ಮಿಸಿದ್ದು, ಪ್ರತೀಕ್ ಗೆ ಜೋಡಿಯಾಗಿ ಅವರ ಪತ್ನಿ ಮೌಲ್ಯ ಅವರೇ ಅಭಿನಯಿಸಿದ್ದಾರೆ. ಇನ್ನುಳಿದಂತೆ ಕಾರ್ತಿಕ್ ಮಹೇಶ್, ಅಶ್ವಿನ್ ರಾವ್ ಪಲ್ಲಕ್ಕಿ, ರಮೇಶ್ ಭಟ್, ಮೂಗ್ ಸುರೇಶ್, ಪಿಡಿ ಸತೀಶ್ ಚಂದ್ರ, ಪ್ರಭಾವತಿ, ಸಮಯ್, ಸಂಗೀತ ನಾರಾಯಣ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ನೀಡಿದ್ದು, ಸೋನು ಗೌಡ ವೇಷಭೂಷಣ, ಜೀಚನ್ ಛಾಯಾಗ್ರಹಣವಿದ್ದು, ಪ್ರತೀಕ್ ಅವರ ಸಂಭಾಷಣೆ ಹಾಗೂ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular