HomeEntertainment25 ದಿನ ಪೂರೈಸಿದ 'ಧೀರ ಸಾಮ್ರಾಟ್'

25 ದಿನ ಪೂರೈಸಿದ ‘ಧೀರ ಸಾಮ್ರಾಟ್’

ಪವನ್ ಕುಮಾರ್ ರಚಿಸಿ ನಿರ್ದೇಶಿಸಿರುವ ‘ಧೀರ ಸಾಮ್ರಾಟ್’ ಚಿತ್ರ ರಾಜ್ಯದಲ್ಲಿಡೆ ಯಶಸ್ವಿಪದರ್ಶನ ಕಾಣುತ್ತಿದ್ದು, ಇದೀಗ 25 ದಿನಗಳನ್ನು ಪೂರೈಸಿದೆ. ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಸಿನಿಮಾದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಫ್ಯಾನ್ಸ್ ವಾರ್ ಗಳ ಕುರಿತು ಮಾತನಾಡಿರುವ ಒಂದು ದೃಶ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಚಿತ್ರವನ್ನು ತನ್ವಿ ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ಗುರು ಬಂಡಿ ನಿರ್ಮಾಣ ಮಾಡಿದ್ದು, ರಾಕೇಶ್ ಬಿರಾದಾರ್ ಹಾಗೂ ಅದ್ವಿತಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಬಾಲರಾಜ್ವಾಡಿ, ನಾಗರಾಜ್, ಯತಿರಾಜ್, ರವೀಂದ್ರನಾಥ್, ಹರೀಶ್ ಅರಸು, ರಮೇಶ್ ಭಟ್, ಶೋಭರಾಜ್ ಮತ್ತು ಇಂಚರ ಉಳಿದ ಪಾತ್ರವರ್ಗದಲ್ಲಿದ್ದಾರೆ. ರಾಘವ್ ಸುಭಾಷ್ ಸಂಗೀತ ಸಂಯೋಜನೆ ನೀಡಿದ್ದು, ಸತೀಶ್ ಚಂದ್ರಯ್ಯ ಸಂಕಲನ, ಅರುಣ್ ಸುರೇಶ್ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular