HomeKarnatakaBREAKING: ಹೆತ್ತ ತಾಯಿಯನ್ನೇ ಕೊಲೆಗೈದು ನೇಣಿಗೆ ಶರಣಾದ ಮಗ

BREAKING: ಹೆತ್ತ ತಾಯಿಯನ್ನೇ ಕೊಲೆಗೈದು ನೇಣಿಗೆ ಶರಣಾದ ಮಗ

ಧಾರವಾಡ: ರಾಜಧಾನಿ ಬೆಂಗಳೂರಿನಲ್ಲಿ ಹೆತ್ತ ತಾಯಿಯೇ ಮೂರು ವರ್ಷದ ಮಗನನ್ನು ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿರುವ ಅಮಾನುಷ ಘಟನೆ ನಡೆದಿರುವ ಬೆನ್ನಲ್ಲೇ ಅತ್ತ ಧಾರವಾಡದಲ್ಲಿ ಮಗನೇ ಹೆತ್ತ ತಾಯಿಯನ್ನು ಹತ್ಯೆಗೈದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ಧಾರವಾಡ ಜಿಲ್ಲೆಯ ಹೊಸಯಲ್ಲಾಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ತಾಯಿ ಶಾರದಾ (60) ಹತ್ಯೆಗೈದ ಮಗ ರಾಜೇಶ (40) ಬಳಿಕ ತಾನು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ತಾಯಿಯ ಪಿಂಚಣಿ ಹಣ ಹಾಗೂ ಖಾಲಿ ಸೈಟ್ ಗಾಗಿ ಮಗ ರಾಜೇಶ್ ಪೀಡಿಸುತ್ತಿದ್ದ. ರಾಜೇಶ್ ತಾಯಿ ಶಾರದಾ 19 ಸಾವಿರ ರೂಪಾಯಿ ಪಿಂಚಣಿ ಹಣ ಪಡೆಯುತ್ತಿದ್ದರು. ಈ ಹಣಕ್ಕಾಗಿ ಪೀಡಿಸುತ್ತಿದ್ದ. ಅಲ್ಲದೇ ಖಾಲಿ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡು ಎಂದು ದುಂಬಾಲು ಬಿದ್ದಿದ್ದ. ಈ ವೇಳೆ ತಾಯಿ ಹಾಗೂ ಮಗನ ನಡುವೆ ಜಗಳ ತಾರಕ್ಕಕ್ಕೇರಿದ್ದು, ಕೋಪದಲ್ಲಿ ತಾಯಿಯನ್ನೇ ಕೊಲೆಗೈದಿದ್ದಾನೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular