HomeLatest NewsBIG NEWS: ಧರ್ಮಸ್ಥಳ ಪ್ರಕರಣ: ವಿಠಲಗೌಡ ವಿರುದ್ಧ SIT ಗೆ ಗ್ರಾಮಸ್ಥರಿಂದ ದೂರು

BIG NEWS: ಧರ್ಮಸ್ಥಳ ಪ್ರಕರಣ: ವಿಠಲಗೌಡ ವಿರುದ್ಧ SIT ಗೆ ಗ್ರಾಮಸ್ಥರಿಂದ ದೂರು

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ಚುರುಕುಗೊಳಿಸಿದೆ. ಈ ನಡುವೆ ಸೌಜನ್ಯ ಮಾವ ವಿಠಲಗೌಡ ವಿರುದ್ಧ ಧರ್ಮಸ್ಥಳ ಗ್ರಾಮಸ್ಥರು ಎಸ್ ಐಟಿಗೆ ದೂರು ನೀಡಿದ್ದಾರೆ.

ಧರ್ಮಸ್ಥಳ ಗ್ರಾಮಸ್ಥ ಸಂದೀಪ್ ರೈ ಎಂಬುವವರು ಬೆಳ್ತಂಗಡಿ ಎಸ್ ಐಟಿ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖಾ ಹಂತದಲ್ಲಿ ವಿಠಲಗೌಡ ಎಸ್ ಐಟಿ ತನಿಖೆ ದಾರಿ ತಪ್ಪಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಎಸ್ ಐಟಿ ವಿಚಾರಣೆ ಮುಗಿಸಿ ಹೊರಬಂದ ಬಳಿಕ ವಿಡಿಯೋ ಹರಿಬಿಟ್ಟಿದ್ದಾನೆ. ಯೂಟ್ಯೂಬ್ ಗಳಿಗೆ ಸಂದರ್ಶನ ನೀಡಿ ವಿಡಿಯೋ ಬಿಟ್ಟಿದ್ದಾನೆ. ಎಸ್ ಐಟಿ ಯಾವುದೇ ಮಾಹಿತಿ ನೀಡದೇ ಇದ್ದರೂ ವಿಡಿಯೋ ಹರಿಬಿಟ್ಟು ತನಿಖೆ ಹಾದಿ ತಪ್ಪಿಸುತ್ತಿದ್ದಾನೆ. ವಿಠಲಗೌಡ ಹಿಂದೆ ಕೆಲ ವ್ಯಕ್ತಿಗಳು ಸೆರಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಕ್ಷ್ಯ ನಾಶ ಮಾಡಲು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಬಗ್ಗೆಯೂ ದೂರು ನೀಡಲಾಗಿದೆ. ವಿಠಲಗೌಡ ವಿರುದ್ಧ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular