ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖಾ ವರದಿ ಸಲ್ಲಿಕೆ ವಿಳಂಬವಾಗಲಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ತಾಂತ್ರಿಕ ಕಾರಣಗಳಿಂದ ಧರ್ಮಸ್ಥಳ ಪ್ರಕರಣದ ಎಸ್ ಐಟಿ ತನಿಖಾ ವರದಿ ವಿಳಂಬವಾಗಿದೆ. ಇದೇ ಕಾರಣಕ್ಕೆ ವರದಿ ಪಡೆಯುವುದನ್ನು ಮುಂದೂಡಿದ್ದೇವೆ ಎಂದರು.
ರಾಜ್ಯ ಮಹಿಲಾ ಆಯೋಗವೂ ತನಿಖೆ ನಡೆಸುವಂತೆ ಕೋರಿದೆ. ಈ ನಿಟ್ಟಿನಲ್ಲಿ ಸಮಗ್ರ ತನಿಖೆಯಾದರೆ ಎಲ್ಲ ಮಾಹಿತಿ ಗೊತ್ತಾಗುತ್ತದೆ ಅದಕ್ಕಾಗಿ ಸಮಯ ತೆಗೆದುಕೊಳ್ಳಲಿದೆ. ಎಲ್ಲಾ ಆಯಾಮಗಳಿಂದಲೂ ನೋಡಿ ವರದಿ ನೀಡಬೇಕು. ಜೊತೆಗೆ ತಾಂತ್ರಿಕ ಕಾರಣದಿಂದಾಗ್ಯೂ ವಿಳಂಬವಾಗಿದೆ ಎಂದರು.
