HomeLatest NewsBREAKING NEWS: ಧರ್ಮಸ್ಥಳ ಪ್ರಕರಣ: 9 ಹಾಗೂ 10ನೇ ಪಾಯಿಂಟ್ ನಲ್ಲಿ ಸಿಗದ ಅಸ್ಥಿಪಂಜರ

BREAKING NEWS: ಧರ್ಮಸ್ಥಳ ಪ್ರಕರಣ: 9 ಹಾಗೂ 10ನೇ ಪಾಯಿಂಟ್ ನಲ್ಲಿ ಸಿಗದ ಅಸ್ಥಿಪಂಜರ

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡ ತನಿಖೆ ಚುರುಕುಗೊಳಿಸಿದ್ದು, ಇಂದು ನಡೆದ ಶೋಧಕಾರ್ಯದಲ್ಲಿ ಯಾವುದೇ ಕಳೇಬರಹ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಶವಗಳನ್ನು ಹೂತಿಟ್ಟುವುದಾಗಿ ದೂರುದಾರ ತೋರಿಸಿರುವ ಜಾಗಗಳಲ್ಲಿ ಮಣ್ಣು ಅಗೆದು ಶೋಧಕಾರ್ಯ ನಡೆಸಲಾಗುತ್ತಿದ್ದು, ಇಂದು 9ನೇ ಹಾಗೂ 10ನೇ ಪಾಯಿಂಟ್ ಗಳಲ್ಲಿ ಶೋಧಕಾರ್ಯ ನಡೆಸಲಾಯಿತು. ಮಿನಿ ಅರ್ಥ ಮೂವರ್ ಮೂಲಕ ಮಣ್ಣು ಅಗೆದರೂ ಯಾವುದೇ ರೀತಿಯ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ 9 ಹಾಗೂ 10ನೇ ಸ್ಥಳಗಳಲ್ಲಿ ಶೋಧಕಾರ್ಯ ಮುಕ್ತಾಯವಾಗಿದೆ.

ನಾಳೆ ಭಾನುವಾರ ರಜಾ ದಿನವಾಗಿರುವುದರಿಂದ ಸೋಮವಾರ ಮತ್ತೆ ಶೋಧಕಾರ್ಯ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular