HomeLive NewsBREAKING: ಧರ್ಮಸ್ಥಳ ಅಸ್ಥಿಪಂಜರ ರಹಸ್ಯ ಕೇಸ್ ಗೆ ಟ್ವಿಸ್ಟ್: ಜೈಲಿನಿಂದ ಹೊರ ಬರುತ್ತಿದ್ದಂತೆ ಐವರ ವಿರುದ್ಧ...

BREAKING: ಧರ್ಮಸ್ಥಳ ಅಸ್ಥಿಪಂಜರ ರಹಸ್ಯ ಕೇಸ್ ಗೆ ಟ್ವಿಸ್ಟ್: ಜೈಲಿನಿಂದ ಹೊರ ಬರುತ್ತಿದ್ದಂತೆ ಐವರ ವಿರುದ್ಧ ಜೀವಬೆದರಿಕೆ ಆರೋಪದಡಿ ದೂರು ನೀಡಿದ ಚಿನ್ನಯ್ಯ

ಮಂಗಳೂರು: ಧರ್ಮಸ್ಥಳ ಅಸ್ಥಿಪಂಜರ ರಹಸ್ಯ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಧರ್ಮಸ್ಥಳದ ಹಲವೆಡೆಗಳಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿ ತೀವ್ರ ಚರ್ಚೆಗೆ ಕಾರಣನಾಗಿದ್ದ ಆರೋಪಿ ಚಿನ್ನಯ್ಯ ಜೈಲು ಪಾಲಾಗಿ, ಜಾಮೀನು ಮೇಲೆ ಬಿಡುಗಡೆಯಾದ ಬಳಿಕ ಇದೀಗ ಹೊಸ ಆರೋಪ ಮಾಡಿದ್ದಾನೆ.

ಜೈಲಿನಿಂದ ಹೊರ ಬರುತ್ತಿದ್ದಂತೆ ಆರೋಪಿ ಚಿನ್ನಯ್ಯ, ತನಗೆ ಹಾಗೂ ತನ್ನ ಪತ್ನಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಿಸಿದ್ದಾನೆ.

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣೆವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂಡಿ ವಿರುದ್ಧ ಚಿನ್ನಯ್ಯ ದೂರು ದಾಖಲಿಸಿದ್ದು, ತನಗೆ ಜೀವಬೆದರಿಕೆಯಿದೆ. ತನಗೆ ಹಾಗೂ ತನ್ನ ಪತ್ನಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾನೆ. ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಹೇಳುವಂತೆ ಸೂಚಿಸಿದ್ದರು ಎನ್ನಲಾದ ಆರೋಪಿಗಳ ವಿರುದ್ಧವೇ ಇದೀಗ ಚಿನ್ನಯ್ಯ ಜೀವಬೆದರಿಕೆ ಆರೋಪ ಮಾಡಿದ್ದು, ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular