HomeKarnatakaಧರ್ಮಸ್ಥಳ ಸಂಘದ ಕಿರುಕುಳದ ಬಗ್ಗೆ ಶಾಸಕರ ಆರೋಪ ಬೆನ್ನಲ್ಲೇ ಮಹಿಳೆ ಆತ್ಮಹತ್ಯೆ

ಧರ್ಮಸ್ಥಳ ಸಂಘದ ಕಿರುಕುಳದ ಬಗ್ಗೆ ಶಾಸಕರ ಆರೋಪ ಬೆನ್ನಲ್ಲೇ ಮಹಿಳೆ ಆತ್ಮಹತ್ಯೆ

ಮಂಡ್ಯ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಮಹಿಳೆಯರಿಗೆ ಸಾಲ ನೀಡಿ ಅತಿ ಹೆಚ್ಚು ಬಡ್ಡಿ ವಸೂಲಿ ಮಾಡುವ ಮೂಲಕ ಬಡವರನ್ನು ಶೋಷಣೆ ಮಾಡಲು ಹೊರಟಿದೆ. ಧರ್ಮಸ್ಥಳ ಸಂಘದಿಂದ ಮಹಿಳೆಯರು ಹೊರಬಂದು ಸಂಜೀವಿನಿ ಒಕ್ಕೂಟ ಸೇರಬೇಕೆಂದು ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಕರೆ ನೀಡಿದ ಬೆನ್ನಲ್ಲೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫೈನಾನ್ಸ್ ನಡೆಸುವ ಸಂಘದಲ್ಲಿ ಸಾಲ ಪಡೆದುಕೊಂಡಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಲಿಯೂರು ಗ್ರಾಮದ ಮಹಾಲಕ್ಷ್ಮಿ(35) ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಘದ ಸಿಬ್ಬಂದಿ ಮಾಡಿದ ಅವಮಾನದಿಂದ ಮನನೊಂದು ಮಹಾಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಐದು ತಿಂಗಳ ಹಿಂದೆ ಸಂಘದಲ್ಲಿ 2 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ ಮಹಾಲಕ್ಷ್ಮಿ ಪ್ರತಿ ಬುಧವಾರ 1700 ರೂ. ಕಂತು ಪಾವತಿಸಬೇಕಿತ್ತು. ಕಂತು ಪಡೆಯಲು ಬಂದಿದ್ದ ನೆಲ್ಲಿಗೆರೆಯ ಪ್ರತಿನಿಧಿ ರತ್ನಮ್ಮ ಹಣ ಕಟ್ಟಲು ಸಮಯ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಮನವೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಾಲಕ್ಷ್ಮಿ ಅವರ ಪ್ರತಿ ಮಲ್ಲು ಪೊಲೀಸರಿಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular