HomeKarnatakaBIG NEWS: ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ನಿಜವಾಯ್ತು ಬೊಂಬೆ ನುಡಿದಿದ್ದ ಭವಿಷ್ಯ!

BIG NEWS: ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ನಿಜವಾಯ್ತು ಬೊಂಬೆ ನುಡಿದಿದ್ದ ಭವಿಷ್ಯ!

ಧಾರವಾಡ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಯುಗಾದಿ ಪಾಡ್ಯದಂದು ಬೊಂಬೆ ನುಡಿದಿದ್ದ ಭವಿಷ್ಯ ನಿಜವಾದಂತಾಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಬಹುದು ಎಂದು ಬೊಂಬೆ ಭವಿಷ್ಯ ನುಡಿದಿತ್ತು.

ಏನಿದು ಬೊಂಬೆ ಭವಿಷ್ಯ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿ ವರ್ಷ ಯುಗಾದಿ ಹಬ್ಬದ ಸಮಯದಲ್ಲಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಗೆ ಹೊಂದಿಕೊಂಡ ಹನುಮನಕೊಪ್ಪ ಗ್ರಾಮದಲ್ಲಿ ಜನರು ಬೊಂಬೆ ಭವಿಷ್ಯ ಕೇಳುವುದು ಸಂಪ್ರದಾಯವಿದೆ. ಅದರಂತೆ ಈ ಬಾರಿ ಯುಗಾದಿ ಪಾಡ್ಯಮಿಯಂದು ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ಕೇಳಿದ್ದರು. ಬೊಂಬೆಯು ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ತ್ಯಾಗ ಮಾಡಬಹುದು ಎಂದು ಭವಿಷ್ಯ ನುಡಿದಿತ್ತು. ಆ ಪ್ರಕಾರ ಇದೀಗ ಬೊಂಬೆ ನುಡಿದ ಭವಿಷ್ಯ ನಿಜವಾಗಿದ್ದು, ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪದತ್ಯಾಗ ಮಾಡಿದ್ದಾರೆ.

ಯುಗಾದಿ ಅಮವಾಸ್ಯೆಯಂದು ಪೂರ್ವಕ್ಕೆ ಹರಿಯುವ ಹಳ್ಳದಲ್ಲಿ ಹನುಮನಕೊಪ್ಪ ಗ್ರಾಮದ ಹಿರಿಯರು ಫಲ ಹಾಕಿ ಬರುತ್ತಾರೆ. ಮಣ್ಣಿನಿಂದ ಗದ್ದುಗೆ ನಿರ್ಮಾಣ ಮಾಡಿ, ನಾಲ್ಕೂ ದಿಕ್ಕಿಗೆ ರಾಜಕಾರಣಿಗಳ ಆಕೃತಿ, ಸೈನಿಕರ ಆಕೃತಿ, ರೈತರ ಆಕೃತಿ ಸೇರಿದಂತೆ ಮಳೆಯ ಹೆಸರಿನಲ್ಲಿ ಧಾನ್ಯ ಹಾಗೂ ಅನ್ನದ ಉಂಡೆಗಳನ್ನು ಇಟ್ಟು ಬರುತ್ತಾರೆ. ಮಾರನೇ ದಿನ ಬೆಳಿಗ್ಗೆ ಬಂದು ಫಲವನ್ನು ನೋಡುತ್ತಾರೆ ಯಾವ್ಯಾವ ಮೂರ್ತಿಗಳಿಗೆ ಪೆಟ್ಟಾಗಿದೆ? ಅನ್ನದ ಉಂಡೆ ಹೇಗಿದೆ? ಮಳೆ, ಬೆಳೆ ಹೇಗಿದೆ ಎಂಬುದನ್ನು ನೋಡಿ ಅದರ ಮೇಲೆ ಭವಿಷ್ಯ ನಿರ್ಧಾರ ಮಾಡುತ್ತಾರೆ.

ಈ ಹಿಂದೆ ಇಂದಿರಾ ಗಾಂಧಿ ಹತ್ಯೆಯಾದಾಗ ರಾಷ್ಟ್ರಮಟ್ಟದ ನಾಯಕರ ಬೊಂಬೆಗೆ ಪೆಟ್ಟಾಗಿತ್ತು. ಯಡಿಯೂರಪ್ಪ ಕುರ್ಚಿ ಬಿಟ್ಟು ಕೆಳಗಿಳಿಯುವಾಗ ಕರ್ನಾಟಕದ ದಿಕ್ಕಿನ ಬೊಂಬೆಗೆ ಪೆಟ್ಟಾಗಿತ್ತು. ಮಳೆ, ಬೆಳೆ ಸಹ ಈ ಬೊಂಬೆ ನುಡಿದ ಭವಿಷ್ಯದಂತೆಯೇ ಆಗಿತ್ತು. ಈ ವರ್ಷ ಕರ್ನಾಟಕದ ದಿಕ್ಕಿನ ಬೊಂಬೆಗೆ ಪೆಟ್ಟಾಗಿದ್ದು, ಆಗ ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೆಳಗಿಳಿಯುವ ಪರಿಸ್ಥಿತಿ ಬರುತ್ತದೆ ಎಂದು ಬೊಂಬೆ ಭವಿಷ್ಯ ನುಡಿದಿತ್ತು. ಆ ಪ್ರಕಾರ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿಎಂ ಕುರ್ಚಿಯಿಂದ ಕೆಳಗಿಳಿದಿದ್ದಾರೆ.

ಪ್ರತಿ ವರ್ಷ ಹನುಮನಕೊಪ್ಪದ ಗ್ರಾಮಸ್ಥರು ಈ ಫಲ ಹಾಕುವ ಪದ್ಧತಿ ನಡೆಸಿಕೊಂಡು ಬಂದಿದ್ದು, ಈ ಬೊಂಬೆ ಭವಿಷ್ಯ ಭಾಗಶಃ ನಿಜವಾಗುತ್ತದೆ ಎಂದು ಹೇಳಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular