HomeLatest NewsBREAKING: ಧಾರವಾಡದಲ್ಲಿ ಇಬ್ಬರು ಮಕ್ಕಳ ಅಪಹರಣ ಶಂಕೆ: ಬೈಕ್ ನಲ್ಲಿ ಕೂರಿಸಿಕೊಂಡು ಎಸ್ಕೇಪ್ ಆದ ವ್ಯಕ್ತಿ

BREAKING: ಧಾರವಾಡದಲ್ಲಿ ಇಬ್ಬರು ಮಕ್ಕಳ ಅಪಹರಣ ಶಂಕೆ: ಬೈಕ್ ನಲ್ಲಿ ಕೂರಿಸಿಕೊಂಡು ಎಸ್ಕೇಪ್ ಆದ ವ್ಯಕ್ತಿ

ಧಾರವಾಡ: ಶಾಲೆಗೆ ಹೋಗಿದ್ದ ಇಬ್ಬರು ಮಕ್ಕಳನ್ನು ವ್ಯಕ್ತಿಯೋರ್ವ ಅಪಹರಿಸಿರುವ ಆರೋಪ ಕೇಳಿಬಂದಿದೆ. ಧಾರವಾಡದ ಕಮಾಲಾಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಮಕ್ಕಳಿಬ್ಬರನ್ನು ಕರೆದುಕೊಂಡು ಬಂದು ಬೈಕ್ ನಲ್ಲಿ ಕೂರಿಸಿಕೊಂಡಿದ್ದ ವ್ಯಕ್ತಿ ಬಳಿಕ ಬೈಕ್ ಸಮೇತ ನಾಪತ್ತೆಯಾಗಿದ್ದಾನೆ. ಮಕ್ಕಳು ಸಂಜೆಯಾದರೂ ಮನೆಗೆ ಬಾರದಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

3ನೇ ತರಗತಿಯ ತನ್ವೀರ್ (9) ಹಾಗೂ ಲಕ್ಷ್ಮೀ ಕರಿಯಪ್ಪನವರ್ (9) ಎಂಬ ಇಬ್ಬರು ಮಕ್ಕಳನ್ನು ವ್ಯಕ್ತಿ ಬೈಕ್ ನಲ್ಲಿ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಶಾಲೆಯಲ್ಲಿ ಮಧ್ಯಾಹ್ನಾ ಊಟಕ್ಕೆ ಬಿಟ್ಟಾಗ ಇಬ್ಬರು ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಂಡ ವ್ಯಕ್ತಿ ಬೈಕ್ ಸಮೇತ ಪರಾರುಯಾಗಿದ್ದು, ಮಕ್ಕಳ ಕಿಡ್ನ್ಯಾಪ್ ಅನುಮಾನ ವ್ಯಕ್ತವಾಗಿದೆ. ಧಾರವಾಡದ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular