HomeEntertainmentBIG NEWS: 'ಡೆವಿಲ್' ಗೆ ಪೈರಸಿ ಕಾಟ: 10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲಿಟ್ ಮಾಡಿದ...

BIG NEWS: ‘ಡೆವಿಲ್’ ಗೆ ಪೈರಸಿ ಕಾಟ: 10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲಿಟ್ ಮಾಡಿದ ಚಿತ್ರತಂಡ

ಬೆಂಗಳೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಬಿಡುಗಡೆಯಾಗಿ 12 ದಿನಗಳು ಕಳೆದಿದ್ದು, ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಡೆವಿಲ್ ಚಿತ್ರಕ್ಕೆ ಪೈರಸಿ ಕಾಟ ಆರಂಭವಾಗಿದೆ.

ದರ್ಶನ್ ಹಾಗೂ ಕಿಚ್ಚ ಸುದೀಪ್ ನಡುವಿನ ಸ್ಟಾರ್ ವಾರ್ ನಡುವೆಯೇ ಡೆವಿಲ್ ಚಿತ್ರತಂಡ ಪೈರಸಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ. ಪೈರಸಿ ಇಂದು ವೈರಸ್ ನಂತೆ ಹಬ್ಬುತ್ತಿದೆ. ಈವರೆಗೆ 10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಗಳನ್ನು ಡಿಲಿಟ್ ಮಾಡಲಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಇಷ್ಟು ದೊಡ್ಡಮಟ್ಟದ ಪೈರಸಿ ಎದುರಾಗಿರಲಿಲ್ಲ ಎಂದು ತಿಳಿಸಿದೆ.

ದಯವಿಟ್ಟು ಯಾರೂ ಪೈರಸಿ ಮಾಡಬೇಡಿ. ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ನೋಡಿ ಎಂದು ಡೆವಿಲ್ ಚಿತ್ರತಂಡ ಮನವಿ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular