ಬಳ್ಳಾರಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಹಿಂದೆ ಪ್ರಕಟಿಸಿ, ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕೆಲವು ಅತ್ಯಂತ ಅಮೂಲ್ಯ ಹಾಗೂ ಪ್ರಮುಖ ಸಾಹಿತ್ಯಿಕ ಕೃತಿಗಳನ್ನು ಮರು ಮುದ್ರಣ ಮಾಡಲು ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಈ ಮಹತ್ವದ ಯೋಜನೆಗಾಗಿ ಇಲಾಖೆಯು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ.
ಇಲಾಖೆಯು ಮರು ಮುದ್ರಿಸಲಿರುವ ಕೃತಿಗಳ ಆಯ್ಕೆಗೆ ಸಂಬAಧಿಸಿದAತೆ ಕೇವಲ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳದೆ, ಸಾರ್ವಜನಿಕರು, ಓದುಗರು ಹಾಗೂ ಸಾಹಿತ್ಯಾಸಕ್ತರ ಪಾಲ್ಗೊಳ್ಳುವಿಕೆಗೆ ಮುಕ್ತ ಅವಕಾಶ ನೀಡಿದೆ. ಸಾಹಿತ್ಯಾಸಕ್ತರಿಂದ ನೇರವಾಗಿ ಕೋರಿಕೆ ಮತ್ತು ಉಪಯುಕ್ತ ಅಭಿಪ್ರಾಯಗಳನ್ನು ಪಡೆದು ಕೃತಿಗಳನ್ನು ಮರು ಮುದ್ರಣ ಮಾಡಲು ನಿರ್ಧರಿಸಲಾಗಿದೆ.
*ಅಭಿಪ್ರಾಯ ಸಲ್ಲಿಸುವುದು ಹೇಗೆ ?
ಯಾವ ಕೃತಿಗಳು ಮರು ಮುದ್ರಣಗೊಳ್ಳಬೇಕು ಎಂಬ ಬಗ್ಗೆ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ತಮ್ಮ ಅನಿಸಿಕೆ, ಸಲಹೆ ಮತ್ತು ಕೋರಿಕೆಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ಆದ kannadasiri.karnataka.gov.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ದಾಖಲಿಸಬಹುದಾಗಿದೆ.
ಸಾರ್ವಜನಿಕರು ತಮ್ಮ ನೆಚ್ಚಿನ ಕೃತಿಗಳ ಮರು ಮುದ್ರಣಕ್ಕಾಗಿ ವೆಬ್ಸೈಟ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

