HomeLatest NewsBREAKING : 'ಕೋಮಾರ್ಬಿಟಿಸ್' ನಿಂದ ಮೃತಪಟ್ಟರೆ 'ಕೋವಿಡ್' ಎಂದು ಪರಿಗಣಿಸುವಂತಿಲ್ಲ: ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ...

BREAKING : ‘ಕೋಮಾರ್ಬಿಟಿಸ್’ ನಿಂದ ಮೃತಪಟ್ಟರೆ ‘ಕೋವಿಡ್’ ಎಂದು ಪರಿಗಣಿಸುವಂತಿಲ್ಲ: ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ !

ಬೆಂಗಳೂರು: ಇನ್ಮುಂದೆ ಕೋಮಾರ್ಬಿಟಿಸ್ ನಿಂದ ಸಾವನ್ನಪ್ಪಿದರೆ ಅದನ್ನು ಕೋವಿಡ್ ಎಂದು ಪರಿಣಗಣಿಸಬೇಡಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ಕೋರ್ಮಾಬಿಟಿಸ್ ಇರುವ ವ್ಯಕ್ತಿಗೆ ಕೋವಿಡ್ ಬಂದರೆ ಪರಿಗಣನೆ ಆಗಲ್ಲ. ಕೋವಿಡ್ ನಿಂದ ಮ್ರತಪಟ್ಟರೆ ಮಾತ್ರ ಬುಲೆಟಿನ್ ನಲ್ಲಿ ವರದಿ ನೀಡಬೇಕು. ಕೋರ್ಮಾಬಿಟಿಸ್ ಇರುವ ವ್ಯಕ್ತಿ ಕೋವಿಡ್ ನಿಂದ ಮೃತಪಟ್ಟರೆ ಅದನ್ನು ಕೊವಿಡ್ ನಿಂದ ಸಾವು ಎಂದು ಪರಿಗಣಿಸುವಂತಿಲ್ಲ ಎಂದು ತಿಳಿಸಿದೆ.

ಇಷ್ಟು ದಿನ ಕೋರ್ಮಾಬಿಟಿಸ್ ನಿಂದ ಸಾವನ್ನಪ್ಪಿದರೆ ಅದನ್ನು ಕೋವಿಡ್ ಸಾವು ಎಂದು ವರದಿ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ ಕೋರ್ಮಾಬಿಟಿಸ್ ರೋಗಿಗೆ ಕೋವಿಡ್ ಬಂದರೆ ಅದನ್ನು ಪರಿಗಣಿಸುವಂತಿಲ್ಲ. ಕೋರ್ಮಾಬಿಟಿಸ್ ಇಲ್ಲದ ವ್ಯಕ್ತಿಗೆ ಕೋವಿಡ್ ಬಂದರೆ ಮಾತ್ರ ಅದನ್ನು ಪರಿಗಣಿಸಬೇಕು. ಕೋವಿಡ್ ನಿಂದ ಮೃತಪಟ್ಟರೆ ಮಾತ್ರ ಅದನ್ನು ಕೋವಿಡ್ ಸಾವು ಎಂದು ವರದಿ ನೀಡಬೇಕು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿದ್ದ ಸಾವಿನ ವರದಿಯನ್ನು ತೆಗೆದು ಹಾಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಬಂದವರಲ್ಲಿ ಸಾವಿಗೀಡಾದ 11 ಜನರಲ್ಲಿ 10 ಜನರ ಸಾವಿನ ವಿಶ್ಲೇಷಣಾ ವರದಿ ಬಂದಿದ್ದು, ಸಾವಿಗೆ ಕೋವಿಡ್ ಸೋಂಕು ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ. ಸಾವಿಗೀಡಾದವರು ಇತರ ಮಾರಕ ಕಾಯಿಲೆಗಳಿಗೆ ತುತ್ತಾಗಿದ್ದಾರೆ ಎಂಬ ಅಂಶವನ್ನ ತಜ್ಞರ ವರದಿಯಲ್ಲಿ ಹೇಳಲಾಗಿದೆ. ಇನ್ನೊಬ್ಬರ ಸಾವಿನ ಡೆತ್ ಆಡಿಟ್ ವರದಿ ಬರಬೇಕಿದೆ. ರಾಜ್ಯದಲ್ಲಿ ಕೋವಿಡ್ ನ ಆತಂಕ ಸ್ಥಿತಿ ಇಲ್ಲವಾದರೂ, ಆರೋಗ್ಯ ಇಲಾಖೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು, ಪ್ರತಿ ಹಂತದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಕಳೆದ 10 ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕೋವಿಡ್ ಟೆಸ್ಟಿಂಗ್ ನಡೆಸಲಾಗಿದೆ. ಆಸ್ಪತ್ರೆಗಳಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಕೂಡ ಉನ್ನತ ಮಟ್ಟದ ಸಭೆ ನಡೆಸಿ ಕೋವಿಡ್ ತಡೆಗಟ್ಟುವಲ್ಲಿ ಅಧಿಕಾರಿಗಳಿಗೆ ಅಗತ್ಯ ನಿರ್ದಶನಗಳನ್ನು ನೀಡಿದರು. ಕೋವಿಡ್ ವಿಚಾರದಲ್ಲಿ ಜನರು ಆತಂಕಗೊಳ್ಳದೇ ತಮ್ಮ ಸಹಜ ಜೀವನ ನಡೆಸಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular