HomeLatest NewsJOB ALERT : ಸಮಗ್ರ ಶಿಕ್ಷಣ ಇಲಾಖೆ : ವಿಶೇಷ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

JOB ALERT : ಸಮಗ್ರ ಶಿಕ್ಷಣ ಇಲಾಖೆ : ವಿಶೇಷ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಳ್ಳಾರಿ :  ಸಮಗ್ರ ಶಿಕ್ಷಣ ಕರ್ನಾಟಕ, ಬಳ್ಳಾರಿ ಜಿಲ್ಲೆಯ ಶಿಕ್ಷಣ ವಿಭಾಗದಡಿ 2026-27ನೇ ಶೈಕ್ಷಣಿಕ ಸಾಲಿಗೆ ಅಗತ್ಯವಿರುವ ವಿವಿಧ ವಿಶೇಷ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕವಾಗಿ ನೇರಗುತ್ತಿಗೆ ಆಧಾರದ ಮೇಲೆ ನೇಮಕಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

*ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:

ಪ್ರಾಥಮಿಕ ವಿಭಾಗ (1 ರಿಂದ 5ನೇ ತರಗತಿ): ಖಾಲಿ ಇರುವ ಹುದ್ದೆಗಳ ಸಂಖ್ಯೆ- 07. ಅರ್ಹತೆಯು ಆರ್.ಸಿ.ಐ ಸಿ.ಆರ್.ಆರ್ ನಂಬರ್ ಹೊಂದಿರುವ ಡಿ.ಇಡಿ ವಿಶೇಷ ಶಿಕ್ಷಣ ಮುಗಿಸಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರೌಢ ವಿಭಾಗ (6 ರಿಂದ 8ನೇ ತರಗತಿ ಹಾಗೂ 9 ರಿಂದ 12ನೇ ತರಗತಿ): ಖಾಲಿ ಇರುವ ಹುದ್ದೆಗಳ ಸಂಖ್ಯೆ- 07. ಅರ್ಹತೆಯು ಆರ್.ಸಿ.ಐ ಸಿ.ಆರ್.ಆರ್ ನಂಬರ್ ಹೊಂದಿರುವ ಬಿ.ಇಡಿ ವಿಶೇಷ ಶಿಕ್ಷಣ ಮುಗಿಸಿರಬೇಕು.

*ಆಯ್ಕೆ ಪ್ರಕ್ರಿಯೆ ಮತ್ತು ಸೇವಾ ಜೇಷ್ಠತೆ

ಈ ಹಿಂದೆ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಬಿ.ಐ.ಇ.ಆರ್.ಟಿ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅವರ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಮೊದಲ ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗುವುದು. ನೇಮಕಾತಿಯು ಇಲಾಖೆಯ ನಿಯಮಾವಳಿಗಳನ್ವಯ ನೇರಗುತ್ತಿಗೆ ಮೂಲಕ ನಡೆಯಲಿದೆ.

*ಅರ್ಜಿ ಸಲ್ಲಿಸಬೇಕಾದ ವಿಳಾಸ:*

ಉಪನಿರ್ದೇಶಕರು (ಆ) ಮತ್ತು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ ಅಭಿಯಾನ (ಕೆ.ಎಸ್.ಇ.ಇ.ಬಿ), ಕೋಟೆ, ಬಳ್ಳಾರಿ ಇಲ್ಲಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜೂ.20 ರ ಒಳಗಾಗಿ ತಲುಪುವಂತೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ಅಭ್ಯರ್ಥಿಗಳು ಕಚೇರಿಯ ವೇಳೆಯಲ್ಲಿ ನೇರವಾಗಿ ಬಳ್ಳಾರಿಯ ಸಮಗ್ರ ಶಿಕ್ಷಣ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಗ್ರ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿ: ಲೋಕಾಯುಕ್ತ ಜನಸಂಪರ್ಕ ಸಭೆ ಹಾಗೂ ಕುಂದುಕೊರತೆಗಳ ಅಹವಾಲು ಸ್ವೀಕಾರ

ಬಳ್ಳಾರಿ ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವತಿಯಿಂದ ಜೂನ್ ತಿಂಗಳಿನಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಆಲಿಕೆ ಹಾಗೂ ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ಲೋಕಾಯುಕ್ತ ಬಳ್ಳಾರಿಯ ಪೊಲೀಸ್ ಅಧೀಕ್ಷಕ ವಾಸುದೇವರಾಮ್ ಎನ್. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಎಸ್.ಎಸ್.ಬೀಳಗಿ, ಪೊಲೀಸ್ ನಿರೀಕ್ಷಕರುಗಳಾದ ಸುರೇಶ್ ಎಂ.ಭಾವಿಮನಿ ಮತ್ತು ಗುರಣ್ಣ ಎಸ್.ಹೆಬ್ಬಾಳ್ ಅವರ ನೇತೃತ್ವದಲ್ಲಿ ಈ ಸಭೆಗಳು ನಡೆಯಲಿವೆ.

ಸಾರ್ವಜನಿಕರು ಗೌರವಾನ್ವಿತ ಲೋಕಾಯುಕ್ತರಿಗೆ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ನಮೂನೆ/ಫಾರಂ ನಂ: 1 ಮತ್ತು 2 ಗಳನ್ನು ಸಹ ನೀಡಲಾಗುತ್ತದೆ.

*ತಾಲ್ಲೂಕುವಾರು ಸಭೆ:*

ಸಂಡೂರು ತಾಲ್ಲೂಕು: ಜೂ.19 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯ ವರೆಗೆ ಸಂಡೂರಿನ ತಹಶೀಲ್ದಾರರ ಕಚೇರಿ ಸಭಾಂಗಣ.

ಕAಪ್ಲಿ ತಾಲ್ಲೂಕು: ಜೂ.19 ರಂದು ಮಧ್ಯಾಹ್ನ 03 ರಿಂದ ಸಂಜೆ 5.30 ಗಂಟೆಯ ವರೆಗೆ ಕಂಪ್ಲಿಯ ತಹಶೀಲ್ದಾರರ ಕಚೇರಿಯಲ್ಲಿರುವ ಸಭಾಂಗಣ.

ಸಿರುಗುಪ್ಪ ತಾಲ್ಲೂಕು: ಜೂ.20 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸಿರುಗುಪ್ಪದ ಸಿ.ಡಿ.ಪಿ.ಓ ಕಚೇರಿಯಲ್ಲಿರುವ ಸಭಾಂಗಣ.

ಕುರುಗೋಡು ತಾಲ್ಲೂಕು: ಜೂ.20 ರಂದು ಮಧ್ಯಾಹ್ನ 3 ಗಂಟೆಯಿAದ ಸಂಜೆ 5 ಗಂಟೆಯ ವರೆಗೆ ಕುರುಗೋಡಿನ ತಹಶೀಲ್ದಾರರ ಕಚೇರಿಯಲ್ಲಿರುವ ಸಭಾಂಗಣ.

ಬಳ್ಳಾರಿ ತಾಲ್ಲೂಕು: ಜೂ.23 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಬಳ್ಳಾರಿಯ ಹೊಸ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಭಾಂಗಣ.

*ಸಾರ್ವಜನಿಕರಲ್ಲಿ ವಿನಂತಿ:*

ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳಿಗೆ ಸಂಬAಧಿಸಿದAತೆ ಯಾವುದೇ ಕುಂದುಕೊರತೆಗಳಿದ್ದಲ್ಲಿ, ಸಾರ್ವಜನಿಕರು ಮೇಲ್ಕಂಡ ದಿನಾಂಕ, ಸಮಯ ಹಾಗೂ ನಿಗದಿತ ಸ್ಥಳಗಳಲ್ಲಿ ಹಾಜರಿದ್ದು, ತಮ್ಮ ಅರ್ಜಿಗಳನ್ನು ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಲೋಕಾಯುಕ್ತ ಬಳ್ಳಾರಿಯ ಪೊಲೀಸ್ ಅಧೀಕ್ಷಕ ವಾಸುದೇವರಾಮ್ ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular