HomeKarnatakaಶೌಚಕ್ಕೆ ಹೋಗಬೇಕೆಂದು ಮಹಿಳೆಯ ಮನೆಗೆ ನುಗ್ಗಿದ ಡೆಲಿವರಿ ಬಾಯ್: ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ: ಕಾಮುಕ...

ಶೌಚಕ್ಕೆ ಹೋಗಬೇಕೆಂದು ಮಹಿಳೆಯ ಮನೆಗೆ ನುಗ್ಗಿದ ಡೆಲಿವರಿ ಬಾಯ್: ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ: ಕಾಮುಕ ಅರೆಸ್ಟ್

ಬೆಂಗಳೂರು: ಪಾರ್ಸಲ್ ಕೊಡಲೆಂದು ಮನೆಗೆ ಬಂದ ಡೆಲಿವರಿ ಬಾಯ್ ಓರ್ವ ಶೌಚಾಲಯಕ್ಕೆ ಹೋಗಬೇಕೆಂದು ಏಕಾಅಏಕಿ ಮಹಿಳೆಯೊಬ್ಬರ ಮನೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.

ಮಾರತಹಳ್ಳಿಯ ಅಪಾರ್ಟ್ಮೆಂಟ್‌ನಲ್ಲಿ ಪಾರ್ಸೆಲ್ ತಲುಪಿಸಲು ಬಂದ ಡೆಲಿವರಿ ಬಾಯ್‌, ಶೌಚಾಲಯ ಬಳಸಬಹುದೇ ಎಂದು ಕೇಳಿದ್ದಾನೆ. ಆದರೆ, ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದ ಕಾರಣ, ಅನುಮತಿ ನಿರಾಕರಿಸಿದ್ದಾರೆ. ಮಹಿಳೆ ಅನುಮತಿ ನೀಡದಿದ್ದರೂ ಚಪ್ಪಲಿಗಳನ್ನು ಕಳಚಿ ಏಕಾಏಕಿ ಮನೆಯೊಳಗೆ ನುಗ್ಗಿದ ಡೆಲಿವರಿಬಾಯ್, ಶೌಚಾಲಯ ಬಳಸಿದ್ದಲ್ಲದೇ, ಮಹಿಳೆ ಒಂಟಿಯಾಗಿರುವುದನ್ನ ಕಂಡು ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ಅನುಚಿತವಾಗಿ ವರ್ತನೆ ಮಾಡಿದ್ದಾನೆ.

ಕಾಮುಕನ ವರ್ತನೆಗೆ ಭಯಗೊಂಡ ಮಹಿಳೆ, ಘಟನೆಯ ವಿಡುಯೀವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ. ಮಾರತ್ತಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾನು ಆತನಿಗೆ ಶೌಚಾಲಯಕ್ಕೆ ಹೋಗಲು ಬಿಡದಿದ್ದರೂ ಆತ ಅನುಮತಿ ಇಲ್ಲದೇ ನುಗ್ಗಿದ್ದಾನೆ. ಅಪರಿಚಿತರಿಗೆ ಫ್ಲಾಟ್ ಒಳಗೆ ಪ್ರವೇಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ತುರ್ತಿದ್ದರೆ, ಅಕ್ಕಪಕ್ಕದ ಪುರುಷರೊಂದಿಗೆ ಮಾತನಾಡಿಕೊಳ್ಳುವಂತೆ ಸಲಹೆ ನೀಡಿದೆ. ಅದ್ಯಾವುದನ್ನೂ ಲೆಕ್ಕಿಸದ ಅವನು, ಒಳಗೆ ನುಗ್ಗಿ ಅನುಮತಿ ಇಲ್ಲದೇ, ಶೌಚಾಲಯ ಬಳಸಿದ್ದಲ್ಲದೇ, ಮಹಿಳೆ ಒಂಟಿಯಾಗಿರುವುದನ್ನ ಕಂಡು ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ಅನುಚಿತವಾಗಿ ವರ್ತನೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾರತ್ತಹಳ್ಳಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಡೆಲಿವರಿ ಬಾಯ್ ನನ್ನು ವಿಜಯ್ ಮಲ್ಲಿಕಾರ್ಜುನ್ ಕಾಮತ್ ಎಂದು ಗುರುತಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular