ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದಿಂದಾಗಿ ಅದರ ಪರಿಣಾಮ ಭಾರತದ ಮೇಲೂ ಬೀರಿದ್ದು, ದೇಶಾದ್ಯಂತ ಎಲ್ ಪಿಜಿ ಸಿಲಿಂಡರ್ ಕೊರತೆಯಿಂದ ಜನರು, ಹೋಟೆಲ್ ಉದ್ಯಮಿಗಳು, ಆಟೋ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿಲಿಂಡರ್ ಸಮಸ್ಯೆಯಿಂದಾಗಿ ಹೋಟೆಲ್ ಗಳು ಸಾಲು ಸಾಲಾಗಿ ಬಂದ್ ಆಗುತ್ತಿವೆ. ಹೋಟೆಲ್ ಉದ್ಯಮಗಳ ಮೇಲೆ ಭಾರಿ ಹೊಡೆತ ಬಿದ್ದಿದೆ. ಇನ್ನೊಂದೆಡೆ ಗೃಹ ಬಳಕೆ ಸಿಲಿಂದರ್ ಗಾಗಿ ಜನರು ಪರಿತಪಿಸುವಂತಾಗಿದೆ.
ಈ ಬೆಳವಣಿಗಳ ನಡುವೆ ದೆಹಲಿ ಸರ್ಕಾರ ಅಲ್ಲಿನ ಪೊಲೀಸ್ ಸಿಬ್ಬಂದೊಗಳಿಗೆ ರಜೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮುಂದಿನ ಸೂಚನೆ ಬರುವವರೆಗೂ ಪೊಲೀಸ್ ಸಿಬ್ಬಂದಿಗಳಿಗೆ ದಿನ ನಿತ್ಯದ ರಜೆ ನೀಡುವುದಿಲ್ಲ ಎಂದು ತಿಳಿಸಿದೆ.
ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಲು ಹಲವೆಡೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದೊಗಳಿಗೆ ರಜೆ ರದ್ದುಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

