HomeIndiaSHOCKING : ಸ್ನೇಹ ಬೆಳೆಸಲು ನಿರಾಕರಣೆ ; ಮನೆಗೆ ನುಗ್ಗಿ 21 ವರ್ಷದ ಮಾಡೆಲ್ ಹತ್ಯೆಗೈದ...

SHOCKING : ಸ್ನೇಹ ಬೆಳೆಸಲು ನಿರಾಕರಣೆ ; ಮನೆಗೆ ನುಗ್ಗಿ 21 ವರ್ಷದ ಮಾಡೆಲ್ ಹತ್ಯೆಗೈದ ಜಿಮ್ ಟ್ರೈನರ್.?

ನವದೆಹಲಿ: ದೆಹಲಿಯಲ್ಲಿ 21 ವರ್ಷದ ಯುವತಿಯನ್ನು ಆಕೆಯ ಮನೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತ ಯುವತಿಯನ್ನು ಮುಸ್ಕಾನ್ ಎಂದು ಗುರುತಿಸಲಾಗಿದ್ದು, ಆಕೆ ವಿದ್ಯಾರ್ಥಿನಿ ಹಾಗೂ ಮಾಡೆಲ್‌ ಆಗಿದ್ದರು. ಪ್ರಕರಣದಲ್ಲಿ ಆಕೆಯ ಜಿಮ್‌ ತರಬೇತುದಾರ ಇಮ್ರಾನ್‌ ವಿರುದ್ಧ ಆರೋಪ ಕೇಳಿಬಂದಿದೆ.

ಪಶ್ಚಿಮ ದೆಹಲಿಯ ತಿಲಕ್‌ ನಗರದಲ್ಲಿರುವ ಕಟ್ಟಡದ ಎರಡನೇ ಮಹಡಿಯ ಮನೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಘಟನೆಯ ವೇಳೆ ಮುಸ್ಕಾನ್‌ ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ.

ಆರೋಪಿ ಇಮ್ರಾನ್‌ ಚಾಕುವಿನಿಂದ ಮುಸ್ಕಾನ್‌ ಮೇಲೆ ದಾಳಿ ನಡೆಸಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮುಸ್ಕಾನ್‌ ಅವರ ಕಿರುಚಾಟ ಕೇಳಿ ನೆರೆಹೊರೆಯವರು ಮನೆಗೆ ಧಾವಿಸಿದಾಗ, ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಂಭೀರ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ” ಎಂದು ಹೆಚ್ಚುವರಿ ಡಿಸಿಪಿ ಅಭಿಷೇಕ್‌ ಗುಪ್ತಾ ತಿಳಿಸಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಿಮ್‌ ತರಬೇತುದಾರನ ವಿರುದ್ಧ ಅನುಮಾನ

ಮುಸ್ಕಾನ್‌ ಅವರ ಸ್ನೇಹಿತ ಅಮನ್‌ ಮಾತನಾಡಿ, ಆಕೆ ಮೂವರು ಸಹೋದರಿಯರಲ್ಲಿ ಕಿರಿಯವಳು ಎಂದು ತಿಳಿಸಿದ್ದಾರೆ. ಪ್ರಸ್ತುತ ಚಂಡೀಗಢದಲ್ಲಿರುವ ಆಕೆಯ ಅಕ್ಕ, ತನಗೆ ಕರೆ ಮಾಡಿ ಮನೆಗೆ ತಕ್ಷಣ ಬರುವಂತೆ ತಿಳಿಸಿದ್ದರು. ಯಾರೋ ಮುಸ್ಕಾನ್‌ ಅವರನ್ನು ಇರಿದಿದ್ದಾರೆ ಎಂದು ಅವರು ಹೇಳಿದ್ದರು ಎಂದು ಅಮನ್‌ ತಿಳಿಸಿದ್ದಾರೆ.ಆರೋಪಿ ಸ್ನೇಹ ಬೆಳೆಸುವಂತೆ ಮುಸ್ಕಾನ್ ಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಇಮ್ರಾನ್‌ ಈ ಹಿಂದೆ ಕೂಡ ಮುಸ್ಕಾನ್‌ಗೆ ಕಿರುಕುಳ ನೀಡುತ್ತಿದ್ದ ಎಂದು ಆಕೆಯ ಸಹೋದರಿಯರು ಹೇಳಿದ್ದರು ಎಂದು ಅಮನ್‌ ಆರೋಪಿಸಿದ್ದಾರೆ. ಈ ಹಿಂದೆಯೂ ಆತ ಇದೇ ರೀತಿಯ ಕಿರುಕುಳ ನೀಡಿದ್ದ ಎಂದು ಅವರು ಹೇಳಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಗಳು ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular