ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಡ್ರೆಸ್ ಹಾಕುವಂತೆ ಪೀಡಿಸಿದ ಪತಿ: ಪತ್ನಿ ಮಾಡಿದ್ದೇನು ಗೊತ್ತಾ…?

ನವದೆಹಲಿ: ತನ್ನ 30 ವರ್ಷದ ಪತ್ನಿಗೆ ಪೋರ್ನ್ ನೋಡುವಂತೆ ಮತ್ತು ಪೋರ್ನ್‌ ಸ್ಟಾರ್‌ ಗಳಂತೆ ಡ್ರೆಸ್ಸಿಂಗ್ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ ದೆಹಲಿಯ ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಾಗಿದೆ.

ತನ್ನ ಪತಿ ಪೋರ್ನ್ ಚಟ ಹೊಂದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. 2020ರಲ್ಲಿ ದಂಪತಿ ವಿವಾಹವಾಗಿದ್ದರು. ತನ್ನ ಪತಿ ಮತ್ತು ಆತನ ಕುಟುಂಬದವರು ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯ ದೂರಿನ ಮೇಲೆ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ. ತನಿಖೆ ಆರಂಭಿಕ ಹಂತದಲ್ಲಿದೆ. ‘ಪ್ರಕರಣದ ಮುಂದಿನ ಕ್ರಮಕ್ಕಾಗಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ, ಡಿಜಿಟಲ್ ಮತ್ತು ಇತರ ಸಾಕ್ಷ್ಯಗಳನ್ನು ಪಡೆದುಕೊಳ್ಳಲಾಗುತ್ತಿದೆ’ ಎಂದು ಉಪ ಪೊಲೀಸ್ ಆಯುಕ್ತ(ಶಹದಾರ) ರೋಹಿತ್ ಮೀನಾ ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read