HomeKarnatakaಶಾಲಾ ಪ್ರತಿಭಾ ಕಾರಂಜಿಯಲ್ಲಿ `ದೈವಾರಾಧನೆ’ ಪ್ರದರ್ಶನ ಮಾಡುವಂತಿಲ್ಲ : ಸಚಿವ ಮಧು ಬಂಗಾರಪ್ಪ

ಶಾಲಾ ಪ್ರತಿಭಾ ಕಾರಂಜಿಯಲ್ಲಿ `ದೈವಾರಾಧನೆ’ ಪ್ರದರ್ಶನ ಮಾಡುವಂತಿಲ್ಲ : ಸಚಿವ ಮಧು ಬಂಗಾರಪ್ಪ

ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ನಡೆಯುವ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ ಪ್ರದರ್ಶನಕ್ಕೆ ಶಿಕ್ಷಣ ಇಲಾಖೆ ನೀಡಿದ್ದ ನೀಡಿದ್ದ ಆದೇಶವನ್ನು ಹಿಂಪಡೆಯುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ವಿಧಾನಸಭೆಯಲ್ಲಿ  ಮಾತನಾಡಿದ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್, ದೈವಾರಾಧನೆ, ದೈವದ ಕೋಲ ಎಂಬುದು ಕರಾವಳಿ ಭಾಗದ ಭಾವನಾತ್ಮಕ ಆಚರಣೆಯಾಗಿದ್ದು, ಪ್ರದರ್ಶನದ ವಸ್ತುವಲ್ಲ. ಹೀಗಾಗಿ ಶಾಲಾ ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆಗೆ ಅವಕಾಶ ನೀಡಿರುವ ಶಿಕ್ಷಣ ಇಲಾಖೆ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುನೀಲ್ ಕುಮಾರ್ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, ಪ್ರತಿಭಾ ಕಾರಂಜಿಯಲ್ಲಿ ದೈವದ ಕೋಲ ಪ್ರದರ್ಶನ ಮಾಡಲು ನೀಡಿದ್ದ ಅವಕಾಶವನ್ನು ಶಿಕ್ಷಣ ಇಲಾಖೆ ಹಿಂಪಡೆಯುವುದಾಗಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular