HomeLatest Newsಹಲಸಿನ ಹಣ್ಣಿನಲ್ಲಷ್ಟೆ ಅಲ್ಲಾ ಎಲೆ, ತೊಗಟೆಯಿದಲೂ ಇದೆ ಇಷ್ಟೆಲ್ಲಾ ಆರೋಗ್ಯಕರ ಪ್ರಯೊಜನ

ಹಲಸಿನ ಹಣ್ಣಿನಲ್ಲಷ್ಟೆ ಅಲ್ಲಾ ಎಲೆ, ತೊಗಟೆಯಿದಲೂ ಇದೆ ಇಷ್ಟೆಲ್ಲಾ ಆರೋಗ್ಯಕರ ಪ್ರಯೊಜನ

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು ಹಲಸಿನ ಹಣ್ಣು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಶುರುವಾಗುವ ಈ ಹಣ್ಣಿನ ಗಾತ್ರ ಬಹು ದೊಡ್ಡದು. ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನ ಪಡೆದುಕೊಂಡಿದೆಯೋ ಹಾಗೆ ಆರೋಗ್ಯದ ವಿಷಯದಲ್ಲೂ ಮಹತ್ತರ ಪ್ರಯೋಜನಗಳನ್ನು ಪಡೆದುಕೊಂಡಿದೆ.

* ಮುಖದ ಮೇಲಿನ ಚರ್ಮ ಸುಕ್ಕುಗಟ್ಟುತ್ತಿದ್ದರೆ, ಹಲಸಿನ ಬೀಜವನ್ನು ತಣ್ಣಗಿರುವ ಹಸುವಿನ ಹಾಲಿನಲ್ಲಿ ನೆನೆಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿದರೆ ಚರ್ಮದ ಸುಕ್ಕು ಕಡಿಮೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ದೇಹದಲ್ಲಿ ಗಾಯವಾಗಿದ್ದರೆ ಹಲಸಿನ ಮರದ ತೊಗಟೆಯನ್ನು ಸುಟ್ಟು ಬೂದಿ ಮಾಡಿ ಆ ಬೂದಿಯನ್ನು ತೆಂಗಿನ ಎಣ್ಣೆ ಜೊತೆ ಕಲಸಿ ಹಚ್ಚಿದರೆ ಗಾಯ ಬೇಗ ಮಾಯುತ್ತದೆ.

* ಹಲಸಿನ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ದೇಹದ ಶಕ್ತಿ ಹೆಚ್ಚುತ್ತದೆ.

* ಮುಖಕ್ಕೆ ಲಕ್ವ ಹೊಡೆದು ನೋವಿದ್ದರೆ ಹಲಸಿನ ಎಲೆಗಳನ್ನು ಎಳ್ಳೆಣ್ಣೆಯಲ್ಲಿ ಬಿಸಿ ಮಾಡಿ ಮುಖದ ಮೇಲೆ ಇಟ್ಟು ಕಟ್ಟಿದರೆ ನೋವು ಕಡಿಮೆಯಾಗುತ್ತದೆ.

* ಭೇದಿ ಆಗುತ್ತಿದ್ದರೆ ಹಲಸಿನ ಮರದ ತೊಗಟೆಯನ್ನು ನೀರಿನ ಜತೆ ಕಷಾಯ ಮಾಡಿ ಸೇವಿಸಿದರೆ ಭೇದಿ ನಿಲ್ಲುತ್ತದೆ. ಹಲಸಿನ ಕಾಯಿ ಪಲ್ಯ ಸೇವಿಸಿದರೂ ಭೇದಿ ನಿಲ್ಲುತ್ತದೆ.

* ಹಲಸಿನ ಎಲೆ ಮತ್ತು ಬೇರಿನ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಚರ್ಮದ ಸಮಸ್ಯೆ ಗುಣವಾಗುತ್ತದೆ.

* ಹೆಚ್ಚು ದಾಹವಾಗುವ ಸಮಸ್ಯೆ ಇದ್ದರೆ ಹಲಸಿನ ಹಣ್ಣನ್ನು ಸಕ್ಕರೆ ಜೊತೆ ಸೇವಿಸಿದರೆ ದಾಹ ನಿವಾರಣೆಯಾಗುತ್ತದೆ.

* ಹಲಸಿನ ಮರದ ಚಕ್ಕೆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ಮತ್ತು ಬಾಯಲ್ಲಿ ಹುಳವಾಗಿದ್ದರೆ ಹುಳಗಳು ಶಮನವಾಗುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular