HomeKarnatakaBIG NEWS: ಹುಲಿ ಉಗುರು ಆಯ್ತು ಈಗ ಜಿಂಕೆ ಕೊಂಬು ಪತ್ತೆ; ಓರ್ವ ಆರೋಪಿ ಅರೆಸ್ಟ್

BIG NEWS: ಹುಲಿ ಉಗುರು ಆಯ್ತು ಈಗ ಜಿಂಕೆ ಕೊಂಬು ಪತ್ತೆ; ಓರ್ವ ಆರೋಪಿ ಅರೆಸ್ಟ್

ಕಾರವಾರ: ಹುಲಿ ಉಗುರು ಧರಿಸಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು, ಹುಲಿ ಚರ್ಮ, ಜಿಂಕೆ ಚರ್ಮ, ಕೊಂಬು ಸೇರಿದಂತೆ ವನ್ಯ ಜೀವಿಗೆ ಸಂಬಂಧಿಸಿದ ಯಾವುದೇ ವಸ್ತು ಸಂಗ್ರಹಿಸಿದ್ದ ಹಲವರಿಗೆ ಸಂಕಷ್ಟ ಎದುರಾಗಿದೆ.

ಉತ್ತರ ಕನ್ನಡದ ಜೋಯಿಡಾದಲ್ಲಿ ಮನೆಯೊಂದರಲ್ಲಿ ಜಿಂಕೆ ಕೊಂಬು ಇದ್ದ ಕಾರಣಕ್ಕೆ ವ್ಯಕ್ತಿಯೋರ್ವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು, ಜಿಂಕೆ ಕೊಂಬು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೋಯಿಡಾದ ಶಿವಾಜಿ ವೃತ್ತದ ಮನೆಯೊಂದರಲ್ಲಿ ಎರಡು ಜಿಂಕೆ ಕೊಂಬುಗಳು ಇದ್ದವು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ ನಾಯ್ಕ್ ಎಂಬಾತನನ್ನು ಬಂಧಿಸಿದ್ದಾರೆ ದಾಂಡೇಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular