HomeLatest NewsBREAKING : ಕೇರಳ ಮೂಲದ ನರ್ಸ್ 'ನಿಮಿಷಾ ಪ್ರಿಯಾ'ಗೆ ಗಲ್ಲುಶಿಕ್ಷೆ : ಆಗಸ್ಟ್ 14 ಕ್ಕೆ...

BREAKING : ಕೇರಳ ಮೂಲದ ನರ್ಸ್ ‘ನಿಮಿಷಾ ಪ್ರಿಯಾ’ಗೆ ಗಲ್ಲುಶಿಕ್ಷೆ : ಆಗಸ್ಟ್ 14 ಕ್ಕೆ ವಿಚಾರಣೆ ಮುಂದೂಡಿಕೆ.!

ಯೆಮೆನ್ ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 14 ಕ್ಕೆ ಮುಂದೂಡಿದೆ.

ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ವಿರುದ್ಧದ ಪ್ರಕರಣವನ್ನು ಕೇಂದ್ರ ಸರ್ಕಾರ “ಉತ್ತಮವಾಗಿ ನೋಡಿಕೊಳ್ಳುತ್ತಿದೆ” ಎಂದು ಭಾರತದ ಸುಪ್ರೀಂ ಕೋರ್ಟ್ ಹೇಳಿದೆ. ಈ ವಾರದ ಆರಂಭದಲ್ಲಿ ಯೆಮೆನ್ ಅಧಿಕಾರಿಗಳು 38 ವರ್ಷದ ಭಾರತೀಯ ಮಹಿಳೆಯ ಮರಣದಂಡನೆಯನ್ನು ಮುಂದೂಡಿದ ನಂತರ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ.

ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ, ನಿಮಿಷಾ ಪ್ರಿಯಾ ಅವರ ಕುಟುಂಬದ ಪರ ಹಾಜರಿದ್ದ ವಕೀಲರು ಪ್ರಕರಣಕ್ಕಾಗಿ ಯೆಮೆನ್ಗೆ ಪ್ರಯಾಣಿಸಲು ಅನುಮತಿ ಕೋರಿದರು. ಆದರೆ, ಪ್ರಯಾಣ ನಿಷೇಧ ಜಾರಿಯಲ್ಲಿರುವ ಕಾರಣ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಅನುಮತಿ ಪಡೆಯುವಂತೆ ಸುಪ್ರೀಂ ಕೋರ್ಟ್ ಹೇಳಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಹಿನ್ನೆಲೆ
ನಿಮಿಷಾ ಪ್ರಿಯಾ ಕೇರಳ ಮೂಲದ ಭಾರತೀಯ ನರ್ಸ್ ಆಗಿದ್ದು, ಯೆಮನ್ನಲ್ಲಿ 2017 ರಲ್ಲಿ ಬ್ಯುಸಿನೆಸ್ ಪಾರ್ಟ್ನರ್ ಕೊಲೆ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular