HomeEntertainment'ಡೆಡ್ಲಿ ಕಿಲ್ಲರ್' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ಡೆಡ್ಲಿ ಕಿಲ್ಲರ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಅಭಯ್ ವೀರ್ ನಟನೆಯ ಬಹು ನಿರೀಕ್ಷಿತ ‘ಡೆಡ್ಲಿ ಕಿಲ್ಲರ್’ ಚಿತ್ರದ ಲಿರಿಕಲ್ ಹಾಡೊಂದನ್ನು ಗೋಲ್ಡನ್ ಸ್ಟಾರ್ ಗಣೇಶ್ ಇಂದು ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಏ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿರುವ ಈ ಹಾಡು ಸಾಕಷ್ಟು ವೀಕ್ಷಣೆ ಗಳಿಸಿದ್ದು, ಕೇಳುಗರಿಂದ ಉತ್ತಮ  ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ‘ಶ್ರುತಿಯಾಗಿ ನೀ ಸೇರು’ ಎಂಬ ಈ ಹಾಡಿಗೆ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದು, ವಿನು ಮನಸು ಸಂಗೀತ ಸಂಯೋಜನೆ ನೀಡಿದ್ದಾರೆ. ಥ್ರಿಲ್ಲರ್ ಮಂಜು ಸಾಹಿತ್ಯವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಥ್ರಿಲ್ಲರ್ ಮಂಜು ನಿರ್ದೇಶನದ ಈ ಚಿತ್ರದಲ್ಲಿ ಅಭಯ್ ವೀರ್ ಸೇರಿದಂತೆ ನಿಷ್ವಿಕ, ಥ್ರಿಲ್ಲರ್ ಮಂಜು, ಸುನಿಲ್, ಲೋಕೇಂದ್ರ ಸೂರ್ಯ  ತೆರೆ ಹಂಚಿಕೊಂಡಿದ್ದಾರೆ. ಕೀರ್ತಿ ಸಿಲ್ವರ್ ಸ್ಕ್ರೀನ್ ಮತ್ತು ವೇದಿಕ ಕೋಸ್ಮಸ್ ಬ್ಯಾನರ್ ನಡಿ ಪ್ರಶಾಂತ್ ತಂಬ್ರಳ್ಳಿ ಮಟ್‌ ನಿರ್ಮಾಣ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular