HomeIndiaಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ಸೂರತ್: ಒಂದೇ ಕುಟುಂಬದ ನಾಲ್ವರು ಶವಾಗಿ ಪತ್ತೆಯಾಗಿರುವ ಘಟನೆ ಸೂರತ್ ನ ಜಹಂಗೀರ್ ಪುರ ಪ್ರದೇಶದಲ್ಲಿನ ಫ್ಲ್ಯಾಟ್ ನಲ್ಲಿ ನಡೆದಿದೆ.

ಫ್ಲಾಟ್ ಮಾಲೀಕ ಜಸುಬೆನ್ ವಧೇಲ್, ಸಹೋದರಿಯರಾದ ಶಾಂತಾಬೆನ್ (53) ಹಾಗೂ ಗೌರಿ ಬೆನ್ ಮೇವಾಡ್ (55) ಹಾಗೂ ಗೌರಿ ಬೆನ್ ಪತಿ ಹೀರಾಭಾಯಿ(60) ಮೃತರು.

ರಾತ್ರಿ ಕುಟುಂಬದವರೆಲ್ಲರೂ ಒಟ್ಟಾಗಿ ಊಟಮಾಡಿ ಮಲಗಿದ್ದರು. ಬೆಳಿಗ್ಗೆ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಜಸುಬೆನ್ ಪುತ್ರ ಮುಖೇಶ್ ಇಂದು ಬೆಳಿಗ್ಗೆ ಚಹಾ ನೀಡಲು ರೂಮಿಗೆ ಹೋದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಾಗಿಲು ತೆರೆದು ನೋಡಿದರೆ ನಾಲ್ವರು ವಾಂತಿ ಮಾಡಿಕೊಂಡು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಲ್ವರು ಸಾವನ್ನಪ್ಪಿದ್ದು, ಸದ್ಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗ್ಯಾಸ್ ಗೀಸರ್ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂಬ ಅನುಮನ ವ್ಯಕ್ತವಾಗಿದೆ. ಸ್ಥಳಕ್ಕಾಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular