ಬೆಂಗಳೂರು : ಉದ್ಯಮಿ ಕಿರಣ್ ಮಜುಂದಾರ್ ಅವರು ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಡಿಸಿಎಂ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ ಕಿರಣ್ ಮಜುಂದಾರ್ ಕೆಲಹೊತ್ತು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಬಯೋಕಾನ್ ನ ಉದ್ಯಮಿ ಮತ್ತು ಸಂಸ್ಥಾಪಕಿ ಶ್ರೀಮತಿ ಕಿರಣ್ ಮಜುಂದಾರ್ ಅವರನ್ನು ಇಂದು ನನ್ನ ನಿವಾಸದಲ್ಲಿ ಭೇಟಿಯಾಗಲು ಸಂತೋಷವಾಯಿತು. ಬೆಂಗಳೂರಿನ ಬೆಳವಣಿಗೆ, ನಾವೀನ್ಯತೆ ಮತ್ತು ಕರ್ನಾಟಕದ ಬೆಳವಣಿಗೆ, ಮುಂದಿನ ಹಾದಿಯ ಕುರಿತು ನಾವು ಆಕರ್ಷಕ ಚರ್ಚೆ ನಡೆಸಿದ್ದೇವೆ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

