HomeUncategorizedಸಮರ್ಥ್ ಶಾಮನೂರು ಶಾಸಕನಾದರೆ ಇಡೀ ದಾವಣಗೆರೆ ಕಬ್ಜಾ ಮಾಡಿಕೊಳ್ತಾರೆ: ಪ್ರಹ್ಲಾದ್ ಜೋಶಿ ವಾಗ್ದಾಳಿ

ಸಮರ್ಥ್ ಶಾಮನೂರು ಶಾಸಕನಾದರೆ ಇಡೀ ದಾವಣಗೆರೆ ಕಬ್ಜಾ ಮಾಡಿಕೊಳ್ತಾರೆ: ಪ್ರಹ್ಲಾದ್ ಜೋಶಿ ವಾಗ್ದಾಳಿ

ದಾವಣಗೆರೆ: ದೇಶದ ಹಲವೆಡೆ ಚುನಾವಣೆ ನಡೆದಿದೆ. ಕಾಂಗ್ರೆಸ್ ಈಸ್ ನೋ ವೇರ್. ಅಲ್ಲಲ್ಲಿ ಉಸಿರಾಡ್ತಿದ್ದಾರೆ. ತಮಿಳುನಾಡಿನಲ್ಲಿ ಆಡಳಿತ ಮಾಡಿದವರು ಈಗ 21 ಸೀಟಿಗಾಗಿ ಸ್ಟಾಲಿನ್ ಕೈ ಹಿಡಿದುಕೊಂಡು ಹೋಗುವ ದುಸ್ಥಿತಿಯಲ್ಲಿದಾರೆ. ಅಬ್ಯೂಸ್​ಮೆಂಟ್ ಪರಾಕಾಷ್ಠೆಯನ್ನು ಈ ದಾವಣಗೆರೆಯಲ್ಲಿ ನೋಡಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಕಾರ್ತಿಕ ದೀಪ ಹಚ್ಚಬೇಕು ಅಂತ ಹೈಕೋರ್ಟ್ ನ್ಯಾಯಾಧೀಶರು ತೀರ್ಪು ಕೊಟ್ಟರೆ ಅವರ ಮೇಲೆ ಕ್ರಮಕ್ಕಾಗಿ ಸೈನ್ ಮಾಡಿದವರು ಇವರು. ದೇವಸ್ಥಾನದ ದೀಪ ಆರಿಸೋಕೆ ಹೊರಡ್ತೀರಿ? ಇದು ತುಷ್ಟೀಕರಣದ ಉಚ್ಛ ಸ್ಥಿತಿ. ಮನೆಯಲ್ಲಿ ಇವರ ತಾತ ಇದ್ದಾಗ ಎಂಎಲ್​ಎ, ಮಂತ್ರಿ. ಈಗ ಮತ್ತೆ ಮಗ. ದಾವಣಗೆರೆ ಅಕ್ಕಪಕ್ಕದ ಕ್ಷೇತ್ರದಲ್ಲಿ ಅವರದೇ ಟಿಕೆಟ್ ಕೊಟ್ಟು ಇಡೀ ದಾವಣಗೆರೆಯನ್ನು ಕಬ್ಜಾ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದವರು ಬಾಗಲಕೋಟೆಯಲ್ಲಿ ಅಹಿಂದ, ಇಲ್ಲಿ ಗೋವಿಂದ. ಟೇಕನ್​ ಫಾರ್​ ಗ್ರಾಂಟೆಡ್​ ಇವರದ್ದು. ಇಲ್ಲಿ ಯಾರೂ ಸಮರ್ಥರಿಲ್ವಾ? ಎಂದು ವಾಗ್ದಾಳಿ ನಡೆಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲಿ ಪ್ರಿಯಾಂಕಾ ಗಾಂಧಿ ಮಗನಿಗೂ ಕ್ಷೇತ್ರ ಹುಡುಕುತ್ತಿದ್ದಾರೆ. ಇಲ್ಲಿ ಸಿದ್ದೇಶ್ವರ್ ಅವರ ಕಾಲದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಆಗಿದೆ. ಕಾಂಗ್ರೆಸ್​ ಕಾರ್ಯಕರ್ತರು ಜಾಗೃತರಾಗಬೇಕು. ಆ ಹುಡುಗನಿಗೆ ನೀವು ಈ ಸಲ ಗೆಲುವು ಕೊಟ್ಟರೆ ಮುಂದೆ ಸಮಸ್ಯೆ ಆಗುತ್ತದೆ. ಅನ್ನಭಾಗ್ಯ ಅಕ್ಕಿ ಒಂದು ಅಗಳೂ ಕೊಡುತ್ತಿಲ್ಲ. ಅಕ್ಕಿ ನಾವು ಕೊಡುತ್ತಿದ್ದೇವೆ, ಅದನ್ನು ಅವರು ಕೊಡುತ್ತಿದ್ದಾರೆ. ಎಲ್​ಪಿಜಿ ಪ್ರಾಬ್ಲಂ ಇದೆ. ಗೃಹ ಬಳಕೆಗೆ ಯಾವುದೇ ಸಮಸ್ಯೆ ಇಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಹೇಳಿಕೆಗಳನ್ನು ನೀವು ನೋಡಿದ್ದೀರಿ ಎಂದರು.

ಇನ್ನೆರಡು ದಿನಗಳಲ್ಲಿ ಪೆಟ್ರೋಲ್​ ಸಿಗಲ್ಲ ಅಂತ ಹೇಳಿದ್ದರು. ಪೆಟ್ರೋಲ್​ ನಿಮಗೆ ಸಿಕ್ಕಿಲ್ಲ ಅಂದರೆ ನಮಗೆ ಹೇಳಿ. ಶೇ.70ರಷ್ಟು ಸ್ಟಾಕ್ ನಮ್ಮಲ್ಲಿದೆ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular