HomeKarnatakaದಾವಣಗೆರೆ ಬಿಜೆಪಿ ಅಭ್ಯರ್ಥಿ ಬದಲಾದರೂ ಆಶ್ಚರ್ಯವಿಲ್ಲ: ಹೊಸ ಬಾಂಬ್ ಸಿಡಿಸಿದ ಯತ್ನಾಳ್

ದಾವಣಗೆರೆ ಬಿಜೆಪಿ ಅಭ್ಯರ್ಥಿ ಬದಲಾದರೂ ಆಶ್ಚರ್ಯವಿಲ್ಲ: ಹೊಸ ಬಾಂಬ್ ಸಿಡಿಸಿದ ಯತ್ನಾಳ್

ವಿಜಯಪುರ: ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಜಿ ಸಂಸದ ಸಿದ್ದೇಶ್ವರ್ ಆಪ್ತನಿಗೆ ಟಿಕೆಟ್ ನೀಡಿದ್ದಾರೆ. ಇದು ಫೈನಲ್ ಅಲ್ಲ. ಕೊನೇ ಕ್ಷಣದಲ್ಲಿ ಟಿಕೆಟ್ ಬದಲಾದರೂ ಅಚ್ಚರಿಯಿಲ್ಲ ಎಂದು ವಿಜಯಪುಅರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ವಿಜಯಪುರಲ್ಲಿ ಮಾತನಾಡಿದ ಶಾಸಕ ಯತ್ನಾಳ್, ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿಯುವವರೆಗೂ ಇದನ್ನು ನಂಬುವ ಹಾಗಿಲ್ಲ. ಕಾಂಗ್ರೆಸ್ಟಿಕೆಟ್ ಮುಸ್ಲಿಂರಿಗೆ ಕೊಟ್ಟರೆ ಇದು ಬದಲಾಗುತ್ತೆ ಎಂದು ಯತ್ನಾಳ್ ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಬಿಜೆಪಿ ಅಭ್ಯರ್ಥಿ ಟಿಕೆಟ್ ಸಿಗುತ್ತೆ. ಶಾಮನೂರು ಅವರ ಉಪಕಾರ ಪೂಜ್ಯ ತಂದೆ ಯಡಿಯೂರಪ್ಪ, ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಮೇಲೆ ಬಹಳಷ್ಟು ಇದೆ. ವಿಜಯೇಂದ್ರ, ರಾಘವೇಂದ್ರ ಗೆಲ್ಲಲು ಶಾಮನೂರು ಅವರ ಸಹಾಯ ಇದೆ. ಟಿಕೆಟ್ ಈಗ ಕೊಟ್ಟಿರುವುದು ಕೇವಲ ತಾತ್ಕಾಲಿಕ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿದ್ದೇಶ್ವರ ಆಪ್ತರಿಗೆ ಟಿಕೆಟ್ ಕೊಟ್ಟರೂ ಪೂಜ್ಯ ತಂದೆ ಹಾಗೂ ಮಕ್ಕಳು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲಿದ್ದಾರೆ. ಶಾಮನೂರು ಉಪಕಾರ ತೀರಿಸಲು ಕೊನೆ ಕ್ಷಣದಲ್ಲಿ ಏನುಬೇಕಾದರೂ ಮಾಡುತ್ತಾರೆ. ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಚರಂತಿಮಠ ಸೂಕ್ತ ಅಭ್ಯರ್ಥಿ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular