HomeKarnataka27 ಲಕ್ಷ ವಂಚನೆ: PDO ವಿರುದ್ಧ ದೂರು ದಾಖಲಿಸಿದ ಮೇಲಾಧಿಕಾರಿಗಳು

27 ಲಕ್ಷ ವಂಚನೆ: PDO ವಿರುದ್ಧ ದೂರು ದಾಖಲಿಸಿದ ಮೇಲಾಧಿಕಾರಿಗಳು

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣಿಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಟಿ.ಸಿದ್ದಪ್ಪ ವಿರುದ್ಧ ಹಣ ಅಕ್ರಮ ಆರೋಪ ಕೇಳಿಬಂದಿದ್ದು, ಮೇಲಾಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಗಳೂರು ತಾಲೂಕಿನ ಬಿಳಿಚೋಡು ಹಾಗೂ ಬಸವನಕೋಟೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಇದ್ದಾಗ 27 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಬೇರೆ ಪಂಚಾಯತ್ ಗಳಿಗೆ ವರ್ಗವಾದರೂ ಪಿಡಿಒ ಸಿದ್ದಪ್ಪ ತನ್ನ ವಂಚನೆ ಚಾಳಿ ಬಿಟ್ಟಿಲ್ಲ ಎಂದು ಆರೋಪ ಕೇಳಿಬಂದಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷರ ಸಹಿ ಕೂಡ ತಾನೇ ಮಾಡಿ ತನಗೆ ಬೇಕಾದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿದ್ದಾರೆ ಆದರೆ ಈ ಹಣ ಗ್ರಾಮ ಪಂಚಾಯತ್ ಪಿಡಿಓ ಸಿದ್ದಪ್ಪ ನುಂಗಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬರೋಬ್ಬರಿ 27 ಲಕ್ಷ ರೂಪಾಯಿ ವಂಚಿಸಿರುವ ಆರೋಪ ಬಂದಿದ್ದು, ಸಿದ್ದಪ್ಪ ವಿರುದ್ಧ ಸಾಲು ಸಾಲು ದೂಈರು ದಾಖಲಾಗಿದೆ. ಪಿಡಿಓ ಸಿದ್ದಪ್ಪ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular