HomeKarnatakaBIG UPDATE : ದಾವಣಗೆರೆಯಲ್ಲಿ 'ಕಲುಷಿತ ನೀರು' ಸೇವನೆ ಪ್ರಕರಣ : ಅಸ್ವಸ್ಥರ ಸಂಖ್ಯೆ 52...

BIG UPDATE : ದಾವಣಗೆರೆಯಲ್ಲಿ ‘ಕಲುಷಿತ ನೀರು’ ಸೇವನೆ ಪ್ರಕರಣ : ಅಸ್ವಸ್ಥರ ಸಂಖ್ಯೆ 52 ಕ್ಕೆ ಏರಿಕೆ..!

ದಾವಣಗೆರೆ: ದಾವಣಗೆರೆಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣ ಸಂಬಂಧ ಅಸ್ವಸ್ಥರಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ 52 ಜನರು ತೀವ್ರ ಅಸ್ವಸ್ಥತೆಯಿಂದ ವಿವಿಧ ಆಸ್ಪತ್ರೆಗೆಗಳಿಗೆ ದಾಖಲಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರ ಸಂಖ್ಯೆ ಹೆಚ್ಚಿದ್ದು, ವಾಂತಿ-ಬೇಧಿಯಿಂದ ಜನರು ಬಳಲುತ್ತಿದ್ದಾರೆ. 52 ಜನರನ್ನು ಚನ್ನಗಿರಿ, ಭದ್ರಾವತಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿಗಳು ಜೋಳದಾಳ್ ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದಾರೆ. ಸಧ್ಯ ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ. ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದವರಲ್ಲಿ 15 ಜನ ಗುನಮುಖರಾಗಿದ್ದಾರೆ ಎಂದು ಡಿಹೆಚ್ ಒ ಡಾ.ಷಣ್ಮುಗಪ್ಪ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular