HomeKarnatakaದರ್ಶನ್ ಹುಟ್ಟುಹಬ್ಬದ ಸೆಲೆಬ್ರೇಷನ್ ಗೆ ಮನೆ ಬಳಿ ಮುಗಿಬಿದ್ದ ಫ್ಯಾನ್ಸ್: ಅತಿರೇಕದ ವರ್ತನೆ ತೋರಿದ ಅಭಿಮಾನಿಗೆ...

ದರ್ಶನ್ ಹುಟ್ಟುಹಬ್ಬದ ಸೆಲೆಬ್ರೇಷನ್ ಗೆ ಮನೆ ಬಳಿ ಮುಗಿಬಿದ್ದ ಫ್ಯಾನ್ಸ್: ಅತಿರೇಕದ ವರ್ತನೆ ತೋರಿದ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ

ಬೆಂಗಳೂರು: ಇಂದು ನಟ ದರ್ಶನ್ ಅವರ ಹುಟ್ಟುಹಬ್ಬ. ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರೂ ಇತ್ತ ಅವರ ಅಭಿಮಾನಿಗಳು ಸೆಲೆಬ್ರೇಷನ್ ಗೆ ಮನೆ ಬಳಿ ಜಮಾವಣೆಗೊಂಡಿದ್ದಾರೆ.

ದರ್ಶನ್ ಅನುಪಸ್ಥಿತಿಯಲ್ಲಿಯೂ ಬೆಂಗಳೂರಿನ ಆರ್.ಆರ್.ನಗರದ ಅವರ ಮನೆ ಬಳಿ ದರ್ಶನ್ ಅಭಿಮಾನಿಗಳು ಧಾವಿಸಿ ಬರುತ್ತಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಮನೆ ಬಳಿ ಬ್ಯಾರಿಕೇಡ್ ಗಳನ್ನು ಹಾಕಿ ತಡೆಯುತ್ತಿದ್ದಾರೆ. ಈ ವೇಳೆ ಕೆಲ ಅಭಿಮಾನಿಗ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಗಲಾಟೆ ಮಾಡಿದ್ದಾರೆ.

ಪೊಲೀಸರು ಎಷ್ಟೇ ಸಮಾಧಾನವಾಗಿ ಬುದ್ಧಿಹೇಳಿದರೂ ಸುಮ್ಮನಾಗದ ಅಭಿಮಾನಿಯೊಬ್ಬ ತಾನು ದರ್ಶನ್ ಮನೆಗೆ ಹೋಗಬೇಕುಬೆಂದು ಪಟ್ಟುಹಿಡಿದು ಕುಳಿತಿದ್ದಾನೆ. ಆತನನ್ನು ಸಮಾಧಾನಪಡಿಸಲು ಪೊಲೀಸರು ಯತ್ನಿಸಿದ್ದಾರೆ. ಆದರು ಕೇಳದ ಆತ ಅತಿರೇಕದ ವರ್ತನೆ ತೋರಿದ್ದಾನೆ. ಆತನ ವರ್ತನೆಗೆ ಗರಂ ಆದ ಪೊಲೀಸ್ ಅಧಿಕಾರಿಯೊಬ್ಬ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟ ದರ್ಶನ್ ಜೈಲಿನಲ್ಲಿದ್ದರೂ ಅವರ ಫ್ಯಾನ್ಸ್ ಮಾತ್ರ ಅವರ ಮನೆ ಬಳಿ ಬಂದು ದರ್ಶನ್ ಪರ ಜೈಕಾರ ಹಾಕುತ್ತಿದ್ದಾರೆ. ದರ್ಶನ್ ಮನೆ ಬಳಿ ಅಭಿಮಾನಿಗಳು ಬೀಡುಬಿಟ್ಟಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular