HomeEntertainmentಮೂರು ತಿಂಗಳಲ್ಲಿ 15 ಕೆ.ಜಿ ತೂಕ ಕಳೆದುಕೊಂಡ ದರ್ಶನ್

ಮೂರು ತಿಂಗಳಲ್ಲಿ 15 ಕೆ.ಜಿ ತೂಕ ಕಳೆದುಕೊಂಡ ದರ್ಶನ್

ಬೆಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ದಿನದಿಂದ ದುನಕ್ಕೆ ತೂಕ ಕಳೆದುಕೊಳ್ಳುತ್ತಿದ್ದಾರೆ.

ದರ್ಶನ್ ಜೈಲು ಸೇರಿ ಮೂರು ತಿಂಗಳಾಗುತ್ತಾ ಬಂದಿದೆ. ಸ್ವಚ್ಛಂದವಾಗಿ ಗೆಳೆಯರೊಂದಿಗೆ ಪಾರ್ಟಿ, ಮೋಜು, ಸಿನಿಮಾ ಚಿತ್ರೀಕರಣ, ಐಷಾರಾಮಿ ಜೀವನದಲ್ಲಿ ಕಾಲಕಳೆಯುತ್ತಿದ್ದ ದರ್ಶನ್ ಇದೀಗ ಜೈಲಿನ ಸೀಮಿತ ವ್ಯವಸ್ಥೆಯಲ್ಲಿ ದಿನದೂಡಬೇಕಾದ ಸ್ಥಿತಿ.

ಜೈಲಿನಲ್ಲಿ ಆರೋಗ್ಯವಾಗಿಯೇ ಇದ್ದರೂ ದರ್ಶನ್ ತೂಕ ಇಳಿಯುತ್ತಿದೆ. ಮೂರು ತಿಂಗಳಲ್ಲಿ 15 ಕೆ.ಜಿ. ತೂಕ ಕಳೆದುಕೊಂಡಿದ್ದಾಗಿ ತಿಳಿದುಬಂದಿದೆ. ಜೈಲು ವಾಸ ದರ್ಶನ್ ಮನಸ್ಸಿನ ಮೇಲೆ ಪರಿಣಾಮ ಬೀರಿ ಬದಲಾಗುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ದರ್ಶನ್ ತೂಕದಲ್ಲಿ ಮಾತ್ರ ಭಾರಿ ಬದಲಾವಣೆಯಾಗುತ್ತಿರುವುದಂತು ನಿಜ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸೇರುವಾಗ ತೂಕ ನೋಡಲಾಗಿತ್ತು. ಇದೀಗ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಈ ವೇಳೆ 15 ಕೆ.ಜಿಯಷ್ಟು ತೂಕ ಕಳೆದುಕೊಂಡಿರುವುದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular