HomeKarnatakaBREAKING NEWS: ನಟ ದರ್ಶನ್ ಗೆ ಸರ್ಜರಿಗೆ ಡೇಟ್ ಫಿಕ್ಸ್: ಮಧ್ಯಂತರ ಜಾಮೀನು ಅಂತ್ಯದ ದಿನವೇ...

BREAKING NEWS: ನಟ ದರ್ಶನ್ ಗೆ ಸರ್ಜರಿಗೆ ಡೇಟ್ ಫಿಕ್ಸ್: ಮಧ್ಯಂತರ ಜಾಮೀನು ಅಂತ್ಯದ ದಿನವೇ ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿ!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ಸರ್ಜರಿಗೆ ಡೇಟ್ ಫಿಕ್ಸ್ ಮಾಡಲಾಗಿದೆ. ಡಿಸೆಂಬರ್ 11ರಂದು ದರ್ಶನ್ ಗೆ ಶಸ್ತ್ರಚಿಕಿತ್ಸೆಗೆ ವೈದ್ಯರು ದಿನಾಂಕ ನಿಗದಿ ಮಾಡಿದ್ದಾರೆ ಎಂದು ಹೈಕೋರ್ಟ್ ಗೆ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ತಿಳಿಸಿದ್ದಾರೆ.

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದಿದ್ದು, ಈ ವೇಳೆ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್, ದರ್ಶನ್ ಮಧ್ಯಂತರ ಜಾಮೀನು ಅವಧಿ ವಿಸ್ತರಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಬೆನ್ನುನೋವು ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ವೈದ್ಯರು ಸರ್ಜರಿಗೆ ಸೂಚಿಸಿದ್ದರೂ ದರ್ಶನ್ ಸರ್ಜರಿಗೆ ಒಳಗಾಗದೇ ವಿಳಂಬ ಮಾಡುತ್ತಿದ್ದರು ಎನ್ನಲಾಗಿದೆ. ಇದೀಗ ದರ್ಶನ್ ಮಧ್ಯಂತರ ಜಾಮೀನು ಅವಧಿ ಮುಗಿಯಲು ಇನ್ನು ಕೆಲ ದಿನಗಳು ಮಾತ್ರ ಬಾಕಿದೆ. ಡಿ.11ರಂದು ದರ್ಶನ್ ಜಾಮೀನು ಅವಧಿ ಅಂತ್ಯವಾಗುತ್ತಿದೆ. ಈ ನಡುವೆ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ್ ಸರ್ಜರಿಗೆ ವಿಳಂಬ ಮಾಡುತ್ತಿರುವ ಬಗ್ಗೆ ಹೈಕೋರ್ಟ್ ಕೂಡ ಪ್ರಶ್ನೆ ಮಾಡಿತ್ತು. ದರ್ಶನ್ ಪರ ವಕೀಲರು ಬಿಪಿ ವ್ಯತ್ಯಾಸದ ಕಾರಣ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದಿನ ವಿಚಾರಣೆ ವೇಳೆ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್, ದರ್ಶನ್ ಗೆ ಸರ್ಜರಿ ಮಾಡಲು ವೈದ್ಯರು ದಿನಾಂಕ ನಿಗದಿ ಮಾಡಿದ್ದಾರೆ. ಡಿ.11ರಂದು ದರ್ಶನ್ ಗೆ ಸರ್ಜರಿಗೆ ಡೇಟ್ ಫಿಕ್ಸ್ ಆಗಿದೆ. ಅಂದೇ ಅವರ ಮಧ್ಯಂತರ ಜಾಮೀನು ಕೂಡ ಮುಕ್ತಾಯವಾಗುತ್ತದೆ. ಹೀಗಾಗಿ ಮಧ್ಯಂತರ ಜಾಮೀನು ಅವಧಿ ವಿಸ್ತರಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular