HomeAutoಭರ್ಜರಿ ಯಶಸ್ಸು ಕಂಡ 'ಕಾಟೇರ' ಚಿತ್ರ ತಂಡಕ್ಕೆ ಕಾರ್ ಗಿಫ್ಟ್

ಭರ್ಜರಿ ಯಶಸ್ಸು ಕಂಡ ‘ಕಾಟೇರ’ ಚಿತ್ರ ತಂಡಕ್ಕೆ ಕಾರ್ ಗಿಫ್ಟ್

ಬೆಂಗಳೂರು: ನಟ ದರ್ಶನ್ ಅಭಿನಯದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಯಶಸ್ವಿಯಾಗಿ 100 ದಿನ ಪೂರೈಸಿದೆ. ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ‘ಕಾಟೇರ’ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಚಿತ್ರತಂಡದ ಮೂವರಿಗೆ ಕಾರ್ ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ನಟ ದರ್ಶನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಕಾಟೇರ’ ಚಿತ್ರಕ್ಕೆ ಕತೆ ಬರೆದ ಜಡೇಶ್ ಕುಮಾರ್ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಮತ್ತು ಪಾತ್ರ ನಿರ್ವಹಿಸಿದ ಸೂರಜ್ ಅವರಿಗೆ ಕಾರ್ ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.

‘ಕಾಟೇರ’ ಚಿತ್ರದಲ್ಲಿ ಸೂರಜ್ ಉತ್ತಮ ಪಾತ್ರ ನಿರ್ವಹಿಸಿದ್ದರು. ಚಿತ್ರೀಕರಣ ಮುಗಿದ ಕೂಡಲೇ ಅವರಿಗೆ ಅಪಘಾತವಾಗಿತ್ತು. ಮಾಸ್ತಿ, ಜಡೇಶ್ ಮತ್ತು ಸೂರಜ್ ಅವರನ್ನು ಗಮನದಲ್ಲಿಟ್ಟುಕೊಂಡು ನಾನು, ದರ್ಶನ್ ಮತ್ತು ತರುಣ್ ಸುಧೀರ್ ಕಾರ್ ನೀಡುವ ನಿರ್ಧಾರ ಕೈಗೊಂಡೆವು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರು ಶ್ರದ್ಧೆಯಿಂದ ಮಾಡಿದ ಕೆಲಸ ಜನರಿಗೆ ಖುಷಿ ಕೊಟ್ಟಿದೆ. ಅದಕ್ಕಾಗಿ ಅವರ ಅವರಿಗಾಗಿ ಚಿಕ್ಕ ಕಾಣಿಕೆ ಅರ್ಪಿಸಿದ್ದೇವೆ. ಉಡುಗೊರೆಗೆ ಬೆಲೆ ಕಟ್ಟಲಾಗದು ಎಂದು ದರ್ಶನ್ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular