HomeKarnatakaನಟ ದರ್ಶನ್ ಗೆ ವಕೀಲರಿಂದ ಪತ್ರ

ನಟ ದರ್ಶನ್ ಗೆ ವಕೀಲರಿಂದ ಪತ್ರ

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಹೆಸರಿಗೆ ಭಾನುವಾರ ವಕೀಲರೊಬ್ಬರಿಂದ ಪ್ರಕರಣದ ಕುರಿತ ಪತ್ರ ಬಂದಿದೆ ಎನ್ನಲಾಗಿದೆ.

ಬಳ್ಳಾರಿ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಹೆಸರಿಗೆ ವಕೀಲರೊಬ್ಬರಿಂದ ಪತ್ರ ಬಂದಿದ್ದು ಅದರಲ್ಲಿನ ಮಾಹಿತಿ ಬಹಿರಂಗವಾಗಿಲ್ಲ. ಹೈ ಸೆಕ್ಯೂರಿಟಿ ಸೆಲ್ ನಲ್ಲಿ ಬಂಧಿಯಾಗಿರುವ ದರ್ಶನ್ ನಿತ್ಯ ಕಾಲ ಕಳೆಯಲು ಪುಸ್ತಕಗಳೇ ಆಸರೆಯಾಗಿವೆ.

ಜೈಲು ಅಧಿಕಾರಿಗಳಿಗೆ ಟಿವಿಗಾಗಿ ದರ್ಶನ್ ಮನವಿ ಮಾಡಿದ್ದು, ದುರಸ್ತಿ ಹಿನ್ನೆಲೆ ಒಂದೆರಡು ದಿನಗಳಲ್ಲಿ ಟಿವಿ ಅಳವಡಿಸಲಾಗುವುದು. ಇತ್ತೀಚೆಗಷ್ಟೇ ದರ್ಶನ್ ಅವರ ಪತ್ನಿ ಮತ್ತು ವಕೀಲರು ಜೈಲಿಗೆ ಭೇಟಿ ನೀಡಿ ಪ್ರಕರಣದ ಕುರಿತಾಗಿ ಚರ್ಚೆ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಅಪರಿಚಿತ ವ್ಯಕ್ತಿಯೊಬ್ಬ ಜೈಲಿನಲ್ಲಿರುವ ದರ್ಶನ್ ಹೆಸರಿಗೆ ಹನುಮನಾಮ ಮತ್ತು ಕಥೆ ಪುಸ್ತಕಗಳನ್ನು ಪಾರ್ಸೆಲ್ ಕಳುಹಿಸಿದ್ದಾರೆ. ಸರ್ವ ಸಂಕಷ್ಟಕ್ಕೆ ಹನುಮಂತನೇ ಪರಿಹಾರ. ಹನುಮಂತನ ಆಶೀರ್ವಾದ ನಿಮ್ಮ ಮೇಲಿದ್ದು, ಈ ಪುಸ್ತಕಗಳನ್ನು ಓದಿರಿ, ನಿಮಗೆ ಒಳ್ಳೆಯದಾಗುತ್ತದೆ ಎಂದು ಬರೆಯಲಾಗಿದೆ. ಪಾರ್ಸೆಲ್ ಅನ್ನು ಜೈಲಿನ ಸಿಬ್ಬಂದಿ ಪರಿಶೀಲಿಸಿದ ಬಳಿಕ ದರ್ಶನ್ ಗೆ ನೀಡಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular