HomeKarnatakaಜೈಲಿನಲ್ಲಿರುವ ನಟ ದರ್ಶನ್ ನೋಡಲು ಬಂದ ಯುವತಿ: ಭೇಟಿಗೆ ಅವಕಾಶ ನೀಡದ ಪೊಲೀಸರು

ಜೈಲಿನಲ್ಲಿರುವ ನಟ ದರ್ಶನ್ ನೋಡಲು ಬಂದ ಯುವತಿ: ಭೇಟಿಗೆ ಅವಕಾಶ ನೀಡದ ಪೊಲೀಸರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ನೋಡಲೆಂದು ಅಭಿಮಾನಿಗಳು ಜೈಲಿನತ್ತ ತೆರಳುತ್ತಿದ್ದಾರೆ. ಆದರೆ ಜೈಲಧಿಕಾರಿಗಳು ದರ್ಶನ್ ಭೇಟಿಯಾಗಲು ಅವಕಾಶ ನಿಡುತ್ತಿಲ್ಲ. ಈ ಮಧ್ಯೆ ನಟ ದರ್ಶನ್ ಕೂಡ ಯಾರೂ ಭೇಟಿಗೆ ಬರಬೇಡಿ ಎಂದು ಪೊಲೀಸರ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಆದಾಗ್ಯೂ ಕೆಲವರು ಜೈಲಿನ ಬಳಿ ತೆರಳಿ ವಾಪಾಸ್ ಆಗುತ್ತಿದ್ದಾರೆ.

ಈ ಮಧ್ಯೆ ಜೈಲಿನಲ್ಲಿರುವ ನಟ ದರ್ಶನ್ ಭೇಟಿಗಾಗಿ ಯುವತಿಯೊಬ್ಬಳು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ. ಆದರೆ ಜೈಲಧಿಕಾರಿಗಳು ಯುವತಿಗೆ ಭೇಟಿಗೆ ಅವಕಾಶ ನೀಡಿಲ್ಲ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಯುವತಿ, ದರ್ಶನ್ ನಮ್ಮ ಕುಟುಂಬದವರು. ಹಾಗಾಗಿ ಭೇಟಿಗಾಗಿ ಬಂದಿದ್ದೆ. ಆದರೆ ಜೈಲಿನ ಅಧಿಕಾರಿಗಳು ದರ್ಶನ್ ಭೇಟಿಗೆ ಅವಕಾಶ ನೀಡಿಲ್ಲ ಹಾಗಾಗಿ ವಾಪಾಸ್ ಆಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನೀವು ಯಾರು? ಹೆಸರೇನು? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದ ಯುವತಿ ಹೆಸರು ಹೇಳಲು ನಿರಾಕರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular