HomeEntertainmentವೇಗವಾಗಿ ತೂಕ ಕಳೆದುಕೊಂಡ ನಟ ದರ್ಶನ್: ಜೈಲು ಅಧಿಕಾರಿಗಳಿಗೆ ಹೊಸ ಟೆನ್ಶನ್ ಆರಂಭ

ವೇಗವಾಗಿ ತೂಕ ಕಳೆದುಕೊಂಡ ನಟ ದರ್ಶನ್: ಜೈಲು ಅಧಿಕಾರಿಗಳಿಗೆ ಹೊಸ ಟೆನ್ಶನ್ ಆರಂಭ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ವೇಗವಾಗಿ ತೂಕ ಕಳೆದುಕೊಂಡಿದ್ದು, ಜೈಲಿನ ಅಧಿಕಾರಿಗಳಿಗೆ ಹೊಸ ತಲೆನೋವು ಶುರುವಾಗಿದೆ.

ತಿಂಗಳೊಳಗೆ ನಟ ದರ್ಶನ್ 10 ಕೆಜಿ ತೂಕ ಕಳೆದುಕೊಂಡಿದ್ದು, ಅತಿ ವೇಗವಾಗಿ ತೂಕ ಕಳೆದುಕೊಳ್ಳುವುದು ಅನಾರೋಗ್ಯಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದರ್ಶನ್ ತೂಕ ಇಳಿಕೆ ಜೈಲಿನ ಅಧಿಕಾರಿಗಳಿಗೆ ಟೆನ್ಶನ್ ತಂದೊಡ್ಡಿದೆ.

ಜೈಲಿಗೆ ಬಂದ ವೇಳೆ ದರ್ಶನ್ ತೂಕ ಬರೋಬ್ಬರಿ 107 ಕೆಜಿ ಇತ್ತು. ಈಗ 10 ಕೆಜಿ ಕಳೆದುಕೊಂಡಿದ್ದು, 97 ಕೆಜಿ ತೂಕ ಹೊಂದಿದ್ದಾರೆ. ವೇಗವಾಗಿ ತೂಕ ಇಳಿಯುತ್ತಿರುವ ಹಿನ್ನೆಲೆಯಲ್ಲಿ ನಟ ದರ್ಶನ್ ಇರುವ ಬ್ಯಾರಕ್ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೈಲಿನಲ್ಲಿನ ಆಹಾರದ ಕ್ರಮ, ಮಾನಸಿಕ ಒತ್ತಡದಿಂದ ತೂಕ ಇಳಿದಿರುವ ಸಾಧ್ಯತೆ ಇದೆ. ಹೀಗಾಗಿ ದರ್ಶನ್ ಆರೋಗ್ಯದ ಮೇಲೆ ಜೈಲಧಿಕಾರಿಗಳು ಎಚ್ಚರ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular