HomeKarnatakaBIG NEWS: ಕೊಲೆ ಆರೋಪಿ ದರ್ಶನ್ ಗೆ ಬೆನ್ನುನೋವು: ಜೈಲಿಗೆ ಬಂತು ಮೆಡಿಕಲ್ ಬೆಡ್ ಹಾಗೂ...

BIG NEWS: ಕೊಲೆ ಆರೋಪಿ ದರ್ಶನ್ ಗೆ ಬೆನ್ನುನೋವು: ಜೈಲಿಗೆ ಬಂತು ಮೆಡಿಕಲ್ ಬೆಡ್ ಹಾಗೂ ದಿಂಬು

ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ದರ್ಶನ್ ಗೆ ಮೆಡಿಕಲ್ ಬೆಡ್ ಹಾಗೂ ದಿಂಬು ರವಾನಿಸಲಾಗಿದೆ.

ದರ್ಶನ್ ಗಾಗಿ ಬಳ್ಳಾರಿ ಜೈಲಿಗೆ ಮೆಡಿಕಲ್ ಬೆಡ್ ಹಾಗೂ ದಿಂಬು ಬಂದಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್, ದಿಂಬು ಕಳುಹಿಸಲಾಗಿದೆ. ದರ್ಶನ್ ಗೆ ಬೆನ್ನು ನೋವು ಹಿನ್ನೆಲೆಯಲ್ಲಿ ನಿನ್ನೆ ವೈದ್ಯರು ತಪಾಸಣೆ ನಡೆಸಿ ವರದಿ ನೀಡಿದ್ದರು. ಅಲ್ಲದೇ ಕೋರ್ಟ್ ಕೂಡ ದರ್ಶನ್ ಗೆ ಅಗತ್ಯವಿರುವ ಚಿಕಿತ್ಸೆ ವ್ಯವಸ್ಥೆಗೂ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಇದೀಗ ದರ್ಶನ್ ಗೆ ಜೈಲಿನಲ್ಲಿ ಮೆಡಿಕಲ್ ಬೆಡ್ ಹಾಗೂ ದಿಂಬಿನ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular