HomeEntertainmentಜೈಲಿನಲ್ಲಿ ನಟ ದರ್ಶನ್ ಗಿಲ್ಲ ಹೆಚ್ಚುವರಿ ಬ್ಲಾಂಕೆಟ್, ಬೆಡ್ ವ್ಯವಸ್ಥೆ: ಡಿಜಿಪಿ ಹೊಸ ಆದೇಶ

ಜೈಲಿನಲ್ಲಿ ನಟ ದರ್ಶನ್ ಗಿಲ್ಲ ಹೆಚ್ಚುವರಿ ಬ್ಲಾಂಕೆಟ್, ಬೆಡ್ ವ್ಯವಸ್ಥೆ: ಡಿಜಿಪಿ ಹೊಸ ಆದೇಶ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಹೆಚ್ಚುವರಿ ಬ್ಲಾಂಕೆಟ್ ಹಾಗೂ ಬೆಡ್ ವ್ಯವಸ್ಥೆಗೆ ಡಿಜಿಪಿ ಅಲೋಕ್ ಕುಮಾರ್ ಕಡಿವಾಣ ಹಾಕಿದ್ದಾರೆ.

ಜೈಲಿನಲ್ಲಿ ವಿಚಾರಣಾಧೀನ ಆರೋಪಿಗಳಿಗೆ ಒದಗಿಸುವ ಸೌಕರ್ಯಗಳ ಬಗ್ಗೆ ಹೊಸದಾಗಿ ಸುತ್ತೋಲೆ ಹೊರಡಿಸಿರುವ ಡಿಜಿಪಿ ಅಲೋಕ್ ಕುಮಾರ್, ಹೊಸ ಆದೇಶ ಹೊರಡಿಸಿದ್ದಾರೆ. ಜೈಲಿನಲ್ಲಿ ಊಟದ ವ್ಯವಸ್ಥೆ ಹಾಗೂ ಬೆಡ್ ವ್ಯವಸ್ಥೆ ಬಗ್ಗೆ ಈ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ವಿಚಾರಣಾಧೀನ ಕೈದಿ ಜೈಲಿನಲ್ಲಿ ಕೊಡುವ ಬ್ಲಾಂಕೆಟ್ ಬಳಸಬೇಕು. ಹೆಚ್ಚುವರಿಯಾಗಿ ಒಂದು ಬ್ಲಾಂಕೆಟ್ ಮಾತ್ರ ಕೊಡಲಾಗುತ್ತದೆ. ಯಾವುದೇ ಹಾಸಿಗೆಯ ಸೌಲಭ್ಯ ಇರುವುದಿಲ್ಲ. ಜೈಲಿನ ನಿಯಮಗಳನ್ನು ಪಾಲಿಸಬೇಕು ಎಂದು ಕಟ್ಟುನಿಟ್ಟಾಗಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಕೋರ್ಟ್ ಗೆ ಅರ್ಜಿಸಲ್ಲಿಸಿ ಹೆಚ್ಚುವರಿ ಬ್ಲಾಂಕೆಟ್ ಪಡೆದಿದ್ದರು. ಜೈಲಿನ ನಿಯಮದ ಪ್ರಕಾರ ಹೆಚ್ಚುವರಿ ಸೌಲಭ್ಯ ಒದಗಿಸಬೇಕೇ ಬೇಡವೇ ಎಂದು ನಿರ್ಧರಿಸುವ ಅಧಿಕಾರ ಡಿಜಿಪಿಗೆ ಇರುತ್ತದೆ, ಈ ಅಧಿಕಾರ ಬಳಸಿ ಡಿಜಿಪಿ ಅಲೋಕ್ ಕುಮಾರ್ ಹೊಸ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಗೆ ಹೆಚ್ಚುವರಿ ಬ್ಲಾಂಕೆಟ್ ಗೆ ಕುತ್ತುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular