ಬೆಂಗಳೂರು ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಕೆಲವು ಸಚಿವರು ಗೈರು ಹಾಜರಾಗುತ್ತಿರುವುದಕ್ಕೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪಕ್ಷಗಳ ಅಸಮಾಧಾನದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಸದನದಲ್ಲಿ ಇಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಗೆ ಕಾರಣವಾಗುತ್ತದೆ. ಅಧಿವೇಶನದ ವೇಳೆ ಸಚಿವರು ತಮ್ಮ ಇಲಾಖೆಯ ಅಥವಾ ಇತರೆ ಯಾವುದೇ ಸಭೆ ಸಮಾರಂಭಗಳನ್ನು ಆಯೋಜಿಸಬಾರದು. ಖುದ್ದಾಗಿ ಸದನದಲ್ಲಿ ಹಾಜರಿರಬೇಕಾಗುತ್ತದೆ ಎಂದು ಸಿಎಂ ಸೂಚನೆ ನೀಡಿದ್ದಾರೆ.
ಪ್ರತಿದಿನವೂ ಅಧಿವೇಶನಕ್ಕೆ ಹಾಜರಾಗಿ ಸದನದ ಘನತೆಯನ್ನು ಗೌರವಿಸಿ ಎಂದು ಪತ್ರ ಬರೆಯುವ ಮೂಲಕ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

