HomeKarnatakaBREAKING: ದರ್ಶನ್ ಹಾಗೂ ಗ್ಯಾಂಗ್ ಗೆ ಮತ್ತೊಂದು ಸಂಕಷ್ಟ: ಪ್ರದೋಷ್ ಮಾಫಿ...

BREAKING: ದರ್ಶನ್ ಹಾಗೂ ಗ್ಯಾಂಗ್ ಗೆ ಮತ್ತೊಂದು ಸಂಕಷ್ಟ: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್

ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಘ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ೧೪ನೇ ಆರೋಪಿ ಪ್ರದೋಷ್ ಎಸ್.ರಾವ್ ಸಲ್ಲಿಸಿದ್ದ ಮಾಅಫಿ ಸಾಕ್ಷಿ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದೆ.

ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಆರೋಪಿ ಪ್ರದೋಷ್ ಸಲ್ಲಿಸಿದ್ದ ಅರ್ಜಿ ವಿಚರಣೆ ನಡೆಸಿದ ಬೆಂಗಳೂರಿನ ೫೯ನೇ ಸಿಸಿಹೆಚ್ ಕೋರ್ಟ್, ಪ್ರದೋಷ್ ಅರ್ಜಿಯನ್ನು ಯನ್ನು ಅಂಗೀಕರಿಸಿದೆ. ಈ ಮೂಲಕ ಪ್ರದೋಷ್ ನನ್ನು ಸಾಕ್ಷಿಯನ್ನಾಗಿ ಪರಿಗಣಿಸಲಾಗುತ್ತದೆ. ಇದರಿಂದ ದರ್ಶನ್ ಹಾಗೂ ಗ್ಯಾಂಗ್ ಗೆ ಸಂಕಷ್ಟ ಎದುರಾದಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಕೋರ್ಟ್, ಪ್ರದೋಷ್ ತನ್ನ ಗಮನದಲ್ಲಿರುವ ಸತ್ಯ ಅಮ್ಶಗಳನ್ನು ಬಹಿರಂಗಪಡಿಸಬೇಕು. ಮುಚ್ಚಿಟ್ತರೆ ಮಾಫಿ ಸಾಕ್ಷಿಯಿಂದ ಆರೋಪಿಯನ್ನಾಗಿಸಲಾಗುವುದು ಎಂದು ಷರತ್ತು ವಿಧಿಸಿದೆ. ಪ್ರಕ್ರಿಯೆ ಮುಗಿಯುವವರೆಗೂ ಪ್ರದೋಷ್ ಜೈಲಿನಲ್ಲಿಯೇ ಇರಬೇಕು. ಷರತ್ತು ಉಲ್ಲಂಗ್ಜಿಸಿದರೆ ಸುಳ್ಳು ಸಾಕ್ಷಿ ಹೇಳಿದ ಕೇಸ್ ದಾಖಲಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಕೋರ್ಟ್ ನ ಷರತ್ತುಗಳನ್ನು ಜೈಲಾಧಿಕಾರಿಗಳ ಮೂಲಕ ಪ್ರದೋಷ್ ಗೆ ರವಾನಿಸಲು ಸೂಚಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular