HomeKarnatakaBREAKING : ಬೆಂಗಳೂರಿನ 'ಪ್ರಸನ್ನ ಥಿಯೇಟರ್' ಬಳಿ ಪುಂಡಾಟ : ನಟ ದರ್ಶನ್ ಅಭಿಮಾನಿಗಳು ಪೊಲೀಸ್...

BREAKING : ಬೆಂಗಳೂರಿನ ‘ಪ್ರಸನ್ನ ಥಿಯೇಟರ್’ ಬಳಿ ಪುಂಡಾಟ : ನಟ ದರ್ಶನ್ ಅಭಿಮಾನಿಗಳು ಪೊಲೀಸ್ ವಶಕ್ಕೆ.!

ಬೆಂಗಳೂರು: ಒಂದೆಡೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾನೆ. ಇನ್ನೊಂದೆಡೆ ದರ್ಶನ್ ಅಭಿನಯದ ‘ಕರಿಯ’ ಚಿತ್ರ ರೀ ರಿಲೀಸ್ ಆಗಿದೆ. ಇದರಿಂದಾಗಿ ದರ್ಶನ್ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ.

ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಥಿಯೆಟರ್ ಗಳಿಗೆ ಲಗ್ಗೆಯಿಡುತ್ತಿದ್ದಾರೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ ನಲ್ಲಿ ದರ್ಶನ್ ಅಭಿಮಾನಿಗಳು ಅತಿರೇಕದ ಅಭಿಮಾನ ಪ್ರದರ್ಶಿಸಿದ್ದಾರೆ. ದರ್ಶನ್ ಫ್ಲೆಕ್ಸ್ ಗೆ ಕ್ಷೀರಾಭೀಷೇಕ ಮಾಡಿ ದರ್ಶನ್ ಪರ ಘೋಷಣೆಗಳನ್ನು ಕೂಗಿದ್ದಾರೆ. ಥಿಯೇಟರ್ ಮುಂಭಾಗ ನೂಕುನುಗ್ಗಲು, ಘರ್ಷಣೆ ಉಂಟಾಗಿದೆ. ಈ ವೇಳೆ ಪೊಲೀಸರು, ದರ್ಶನ್ ಅಭಿಮಾನಿಗಳಿಗೆ ಸಮಾಧಾನ ಚಿತ್ತದಿಂದ ಇರುವಂತೆ ಸೂಚಿಸಿದ್ದಾರೆ. ಅಭಿಮಾನವಿರಲಿ ಆದರೆ ಈ ರೀತಿ ಅತಿರೇಕದ ಅಭಿಮಾನ ದರ್ಶನ್ ಅವರಿಗೂ ಕೆಟ್ಟಹೆಸರು ತರುತ್ತದೆ ಎಂದು ಎಚ್ಚರಿಸಿದ್ದಾರೆ.

ಪೊಲೀಸರ ಸೂಚನೆಗೂ ಕಿವಿಗೊಡದ ದರ್ಶನ್ ಅಭಿಮಾನಿಗಳು ಪುಂಡಾಟ ಮೆರೆದಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ಮಾತನಾಡಿದ್ದಾರೆ. ಅಭಿಮಾನಿಗಳ ಹುಚ್ಚಾಟ ಹೆಚ್ಚುತ್ತಿದ್ದಂತೆ ಕೆ.ಪಿ.ಅಗ್ರಹಾರ ಪೊಲೀಸರು ಪುಂಡಾಟ ಮೆರೆಯುತ್ತಿದ್ದ ದರ್ಶನ್ ನ ಕೆಲ ಅಭಿಮಾನಿಗಳನ್ನು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular