HomeKarnatakaBIG NEWS: ಕೋಲಾರದಲ್ಲಿ ಜೋರಾಯ್ತು ಸಿದ್ದರಾಮಯ್ಯ ಸೋಲಿಸಲು ಕರಪತ್ರ ಅಭಿಯಾನ

BIG NEWS: ಕೋಲಾರದಲ್ಲಿ ಜೋರಾಯ್ತು ಸಿದ್ದರಾಮಯ್ಯ ಸೋಲಿಸಲು ಕರಪತ್ರ ಅಭಿಯಾನ

ಕೋಲಾರ: ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ಇದೀಗ ಸಿದ್ದರಾಮಯ ಸೋಲಿಸಲು ಕರೆ ನೀಡಿ ಹೊಸ ಅಭಿಯಾನವೇ ಆರಂಭವಾಗಿದೆ.

ಕೋಲಾರ ಕ್ಷೇತ್ರದಾದ್ಯಂತ ಸಿದ್ದರಾಮಯ್ಯ ವಿರುದ್ಧ ಕರಪತ್ರ ಅಭಿಯಾನ ಆರಂಭವಾಗಿದ್ದು, ಸಿದ್ದರಾಮಯ್ಯ ಅವರನ್ನು ಕೋಲಾರದಿಂದ ಸೋಲಿಸಿ, ಅವರಿಗೆ ದಲಿತ ಶಕ್ತಿ ತೋರಿಸಿ ಎಂಬ ಕರಪತ್ರ ಹಂಚಲಾಗುತ್ತಿದೆ. ಈ ಮೂಲಕ ಕೋಲಾರದಲ್ಲಿ ದಲಿತ ಸಿಎಂ ಕೂಗು ಜೋರಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಲಿತ ನಾಯಕರ ವಿರುದ್ಧ ಒಳಸಂಚು ಮಾಡಿದ್ದ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಕರೆ ಕ್ಷೇತ್ರಾದ್ಯಂತ ಕೇಳಿಬರುತ್ತಿದೆ. ಒಟ್ಟಾರೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದಾಗಿ ಘೋಷಣೆಯಾಗುತ್ತಿದ್ದಂತೆ ದಲಿತ ನಾಯಕರು ಸಿದ್ದರಾಮಯ್ಯ ವಿರುದ್ಧ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular