HomeLive Newsಮಸೀದಿ ವಿಚಾರವಾಗಿ ಗಲಾಟೆ: ತಲವಾರ್, ಕಬ್ಬಿಣದ ರಾಡ್ ನಿಂದ ಹೊಡೆದಾಡಿಕೊಂಡ ಜನರು: ಬಂಟ್ವಾಳದಲ್ಲಿ ಪರಿಸ್ಥಿತಿ ಉದ್ವಿಗ್ನ

ಮಸೀದಿ ವಿಚಾರವಾಗಿ ಗಲಾಟೆ: ತಲವಾರ್, ಕಬ್ಬಿಣದ ರಾಡ್ ನಿಂದ ಹೊಡೆದಾಡಿಕೊಂಡ ಜನರು: ಬಂಟ್ವಾಳದಲ್ಲಿ ಪರಿಸ್ಥಿತಿ ಉದ್ವಿಗ್ನ

ಮಂಗಳೂರು: ಮಸೀದಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತಲವಾರ್, ಕಬ್ಬಿಣದ ರಾಡ್, ದೊಡ್ಡೆಯಿಂದ ಜನರು ಹೊಡೆದಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ತಲೆಮೊಗರು ಮಸೀದಿ ಬಳಿ ಗಲಾಟೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಸೀದಿ ವಿಚಾರದಲ್ಲಿ ಆರಂಭವಾದ ಈ ಗಲಾಟೆ ಹಿಂಸಾ ರೂಪ ಪಡೆದುಕೊಂಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಬ್ದುಲ್ ನವಾಝ್ (42) ಅವರು ತಮ್ಮ ಸಂಬಂಧಿ ದಾವೂದ್ ಜೊತೆಗೆ ಮಸೀದಿಗೆ ತೆರಳಿ ವಾಪಾಸಾಗುವಾಗ ಶೌಕತ್, ಇಸಾಕ್, ಸಫಿಕ್, ಯಾಕೂಬ್, ಮಹಮ್ಮದ್ ಮುಸ್ತಫಾ, ನಾಸಿರ್ ಮತ್ತು ನಿಝಾಲ್ ಸೇರಿ ಗುಂಪಾಗಿ ನಿಂತಿದ್ದವರು ತಕರಾರು ತೆಗೆದು ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಕತ್ತಿ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆ ಸಂಬಂಧ ಅಬ್ದುಲ್ ಗಫೂರ್ (48) ಎಂಬವರು ಪ್ರತಿದೂರು ದಾಖಲಿಸಿದ್ದು, ಯಾಕೂಬ್, ಶಫೀಕ್, ಇಸಾಕ್, ಸಫ್ವಾನ್ ಮತ್ತು ಅಶ್ರಫ್ ಸಾಹೇಬ್ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ಶೌಕತ್ ಅಲಿ (40) ಎಂಬವರು ನೀಡಿದ ಮತ್ತೊಂದು ದೂರಿನ ಪ್ರಕಾರ, ದಾವೂದ್, ಜುಬೈರ್, ಸೈದುದ್ದೀನ್, ನವಾಜ್, ಗಫೂರ್, ಶರೀಪ್ ಮತ್ತು ಆಶಿಕ್ ಮಸೀದಿ ವಿಚಾರದಲ್ಲಿ ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆ ತಡೆಹಿಡಿಯಲು ಬಂದ ಸಫಾನಾ, ನಿಜಾಲ್, ಇಸಾಕ್ ಮತ್ತು ಆಶ್ರಫ್ ಅವರ ಮೇಲೂ ದಾಳಿ ಯತ್ನ ನಡೆದಿದೆ ಎನ್ನಲಾಗಿದೆ.

ಗಲಾಟೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ಸೇರಿ ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪೊಲೀಸರು ಬಿಎನ್​ಎಸ್ ಹಾಗೂ ಶಸ್ತ್ರಾಸ್ತ್ರಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular