HomeLatest NewsBREAKING NEWS: ಮಳೆ ಅವಾಂತರಕ್ಕೆ ದಕ್ಷಿಣ ಕನ್ನಡದಲ್ಲಿ 5ನೇ ಬಲಿ: ವಿದ್ಯುತ್ ಪ್ರವಹಿಸಿ ಮೆಸ್ಕಾಂ ಸಿಬ್ಬಂದಿ...

BREAKING NEWS: ಮಳೆ ಅವಾಂತರಕ್ಕೆ ದಕ್ಷಿಣ ಕನ್ನಡದಲ್ಲಿ 5ನೇ ಬಲಿ: ವಿದ್ಯುತ್ ಪ್ರವಹಿಸಿ ಮೆಸ್ಕಾಂ ಸಿಬ್ಬಂದಿ ದುರ್ಮರಣ

ಮಂಗಳೂರು: ವರುಣಾರ್ಭಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ಅನಾಹುತಗಳು ಸಂಭವಿಸಿವೆ. ಗುಡ್ಡ ಕುಸಿದು ಮೂವರು ಸಾವು, ಮೀನುಗಾರಿಕಾ ಬೋಟ್ ಪಲ್ಟಿಯಾಗಿ ಇಬ್ಬರು ಕಣ್ಮರೆ ಘಟನೆ ಬೆನ್ನಲ್ಲೇ ಇದೀಗ ಕರೆಂಟ್ ಶಾಕ್ ಹೊಡೆದು ಮೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಳೆಯಿಂದ ಕೆಟ್ಟುಹೋಗಿದ್ದ ಟಿಸಿ ದುರಸ್ತಿ ವೇಳೆ ಹೈಟೆನ್ಶನ್ ವಿದ್ಯುತ್ ವೈರ್ ನಿಂದ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಸಿಬ್ಬಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿನ್ಮಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಜೇಶ್ ಜೈನ್ (27) ಮೃತ ಸಿಬ್ಬಂದಿ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular