ಮೂರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತ ಆಂಡಿ ಮರೆ೯ ಅವರಿಗೆ ಇತ್ತೀಚೆಗೆ ಒಂದು ವಿಚಿತ್ರವಾದ ಅನುಭವವಾಗಿದೆ. ಅವರು ತಮ್ಮ 6 ವರ್ಷದ ಮಗನನ್ನ ಶಾಲೆಗೆ ಬಿಡಲು ಹೋದಾಗ, ಅವರ ಮಗ ಹೇಳಿದ್ದ ಮಾತನ್ನ ಕೇಳಿ ದಂಗಾಗಿ ಹೋಗಿದ್ದಾರೆ. ಅಷ್ಟಕ್ಕೂ ಅವರ ಮಗ ಹೇಳಿದ್ದ ಮಾತಾದರೂ ಏನು ಗೊತ್ತಾ? “ಅಪ್ಪ ಶಾಲೆ ಬಿಡಲು ಬಂದಾಗ ನನಗೆ ಮುತ್ತು ಕೊಡಬೇಡ, ಅಪ್ಪಿಕೊಳ್ಳೊದು ಬೇಡ, ಕಾರಲ್ಲಿ ಸುಮ್ಮನೆ ಕುಳಿತುಕೊಳ್ಳಿ ಸಾಕು“ ಎಂದು ಹೇಳಿದ್ಧಾನೆ.
ತನ್ನ ಮಗ ಆರು ವರುಷದ ಮಗ ಹೀಗೆ ಹೇಳುವಷ್ಟು ದೊಡ್ಡವನಾದನಾ ಎಂದು ಅವರು ಶಾಕ್ ಆಗಿದ್ದಾರೆ. ಈ ತಮಾಷೆಯ ವಿಚಾರವನ್ನ ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಆಂಡಿ ಮರೆ೯ ತಮ್ಮ ಅಭಿಮಾನಿಗಳ ಹಂಚಿಕೊಂಡಿದ್ದಾರೆ. ಮಗನ ಮಾತು ಕೇಳಿ ದಂಗಾಗಿ ಹೋಗಿರುವ ಮರೆ೯,‘ ಅದೊಂದು ಕಠಿಣ ಆಟದಂತಿತ್ತು, ವಾಸ್ತವ ಏನು ಅನ್ನೊದು ಈಗ ಗೊತ್ತಾಗ್ತಿದೆ, ಎಂದು ತಮಾಷೆ ಮಾಡಿದ್ದಾರೆ.
ಆಂಡಿ ಮರೆ೯ ಅವರ ಈ ಟ್ವಿಟ್‌ಗೆ ಅವರ ಅನೇಕ ಅಭಿಮಾನಿಗಳು ಪ್ರತಿಕ್ರಿಯೆಸಿದ್ದಾರೆ. ಒಬ್ಬರು “ ನೀವು ಬೇಸರಗೊಳ್ಳಬೇಡಿ, ಮಗನನ್ನ ಮತ್ತೆ ಮನೆಗೆ ಕರೆದುಕೊಂಡು ಹೋಗುವಾಗ, ನೀವು ಮತ್ತೆ ಫಾರ್ಮಲ್ಲಿ ಬಂದಿರುತ್ತಿರಿ” ಎಂದಿದ್ದಾರೆ.
ಇನ್ನೊಬ್ಬರು ನಾನು ಶಾಲೆಗೆ ಹೋಗುವಾಗಲೂ ನನಗೆ ಬಿಡಲು ನನ್ನ ಪಾಲಕರು ಬಂದಾಗ ಅವರೂ ಕೂಡಾ ದೂರ ನಿಲ್ಲಬೇಕಾಗಿತ್ತು. ಯಾಕಂದ್ರೆ ನಾನು ಒಬ್ಬನೇ ಸ್ವಲ್ಪ ದೂರ ನಡೆಯಬೇಕಾಗಿತ್ತು.
ಹಾಗೆ ಮಗದೊಬ್ಬರು “ಮಕ್ಕಳಿಗೆ ಎಲ್ಲರ ಮುಂದೆ ಅಪ್ಪಿಕೊಳ್ಳೊದಕ್ಕಿಂತ ಮುಜುಗರ ಆಗ್ತಿದ್ರೆ, ಅವರಿಗೆ ಆಶೀರ್ವಾದ ಮಾಡಿ, ಅವರಿಗೆ ಅದೇ ತಾನೇ ಬೇಕು“ ಎಂದು ಬರೆದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಂಡಿ ಪೋಸ್ಟ್ ಮಾಡಿರುವ ಟ್ವೀಟ್ಗೆ ಕಾಮೆಂಟ್ ಹಾಕಿದ್ದಾರೆ.
https://twitter.com/andy_murray/status/1618173440309219328?ref_src=twsrc%5Etfw%7Ctwcamp%5Etweetembed%7Ctwterm%5E1618173440309219328%7Ctwgr%5E441c1abd9a876bab901e717d1d8e2bc5839ecac8%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fdaddy-dont-kiss-tennis-star-andy-murray-has-tough-game-while-dropping-6-year-old-child-at-school-3724053