HomeKarnatakaಹಾಡಹಗಲೇ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ನಗ - ನಗದು ಅಪಹರಣ....!

ಹಾಡಹಗಲೇ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ನಗ – ನಗದು ಅಪಹರಣ….!

ಸಾಗರದ ಮಾರಿ ಜಾತ್ರೆಗೆ ಕಾರಿನಲ್ಲಿ ತೆರಳುತ್ತಿದ್ದ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ಹಾಡಹಗಲೇ ನಗ – ನಗದು ಅಪಹರಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗ ಸಮೀಪ ನಡೆದಿದೆ.

ತರೀಕೆರೆಯ ವಸಂತ ಎಂಬವರು ಮಂಗಳವಾರ ಮಧ್ಯಾಹ್ನ ಸಾಗರಕ್ಕೆ ತೆರಳುತ್ತಿದ್ದ ವೇಳೆ ಶಿವಮೊಗ್ಗ ಸಮೀಪದ ಟ್ರೀ ಪಾರ್ಕ್ ಬಳಿ ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ಕಾರು ನಿಲ್ಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಗ ಹೋಂಡಾ ಡಿಯೋ ದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವಸಂತ ಅವರ ಕುತ್ತಿಗೆಗೆ ಮಚ್ಚು ಇಟ್ಟು ಚಿನ್ನದ ಸರ ಹಾಗೂ 5,000 ನಗದು ಕಸಿದುಕೊಂಡು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುಂಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular